ಬೆಂಗಳೂರು: ನಟ ಅಮಿತಾಭ್ ಬಚ್ಚನ್‍ಗೆ ನೋಟಿಸ್ ನೀಡಿದ ಆರ್ ಟಿಒ ಆಧಿಕಾರಿಗಳು

Update: 2021-08-23 13:23 GMT
ಅಮಿತಾಭ್ ಬಚ್ಚನ್‍

ಬೆಂಗಳೂರು, ಆ.23: ದುಬಾರಿ ಕಾರು ವಶಕ್ಕೆ ಪಡೆದಿರುವ ಸಂಬಂಧ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಬೆಂಗಳೂರು ಆರ್‍ಟಿಓ ಅಧಿಕಾರಿಗಳು ನೋಟಿಸ್ ಅನ್ನು ಜಾರಿಗೊಳಿಸಿದ್ದಾರೆ.

ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿದ ಆರ್‍ಟಿಓ ಅಧಿಕಾರಿಗಳು ಹಲವು ಐಶಾರಾಮಿ ಕಾರುಗಳನ್ನು ವಶಕ್ಕೆ ಪಡೆದು ದಾಖಲೆ ಪರಿಶೀಲನೆ ನಡೆಸಿದ್ದರು.

ಈ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರದ್ದು ಎನ್ನಲಾದ ರೋಲ್ಸ್ ರಾಯ್ಸ್ ಕಾರನ್ನು ವಶಕ್ಕೆ ಪಡೆದಿದ್ದರು. ಆದರೆ, ಸರಿಯಾದ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ.

ರೋಲ್ಸ್ ರಾಯ್ಸ್ ಕಾರಿಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಬೇಕು. ಕಾರು ಖರೀದಿ ಸಂಬಂಧ ದಾಖಲೆ ಸೇರಿದಂತೆ ಇನ್ನಿತರೆ ಇಲಾಖಾ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಿಸುವಂತೆ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News