ಅತ್ಯಾಚಾರ ಆರೋಪಿ ಗುವಾಹಟಿ ಐಐಟಿ ವಿದ್ಯಾರ್ಥಿಗೆ ಜಾಮೀನು ನೀಡಿದ ಹೈಕೋರ್ಟ್

Update: 2021-08-23 13:45 GMT

ಗುವಾಹಟಿ: ತನ್ನ ಸಹಪಾಠಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ  ಐಐಟಿ ಗುವಾಹಟಿಯ ವಿದ್ಯಾರ್ಥಿಯೊಬ್ಬನಿಗೆ ಜಾಮೀನು ನೀಡಿದ ಗುವಹಾಟಿ ಹೈಕೋರ್ಟ್, ಇಬ್ಬರನ್ನೂ ರಾಜ್ಯದ ಭವಿಷ್ಯದ ಆಸ್ತಿ ಎಂದು ಬಣ್ಣಿಸಿದೆ.

ಬಿ.ಟೆಕ್ ವಿದ್ಯಾರ್ಥಿ ಉತ್ಸವ್ ಕದಮ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಅಜಿತ್ ಬೊರ್ತಕೂರ್, "ಆತನ ವಿರುದ್ಧದ ಆರೋಪಗಳು ಲಭ್ಯ ಸಾಕ್ಷ್ಯಗಳ ಆಧಾರದಲ್ಲಿ ಹೊರನೋಟಕ್ಕೆ ನಿಜವೆಂದು ತೋರುತ್ತದೆ. ತನಿಖೆ ಪೂರ್ಣಗೊಂಡಿರುವುದರಿಂದ ಹಾಗೂ ದೂರುದಾರೆ ಹಾಗೂ ಆರೋಪಿ ಇಬ್ಬರೂ ಐಐಟಿ ಗುವಾಹಟಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿರುವುದರಿಂದ ಅವರು ರಾಜ್ಯದ ಭವಿಷ್ಯದ ಆಸ್ತಿಯಾಗಿದ್ದಾರೆ. ಆರೋಪಿಯನ್ನು ಬಂಧನದಲ್ಲಿರಿಸುವುದು ಅಗತ್ಯವಿರಲಿಕ್ಕಿಲ್ಲ" ಎಂದು ನ್ಯಾಯಾಲಯ ಹೇಳಿದೆ.

"ಆರೋಪಿಯನ್ನು ಬಿಡುಗಡೆಗೊಳಿಸಿದರೂ ಆತ ಸಾಕ್ಷಿಯನ್ನು ನಾಶಗೊಳಿಸುವ ಸಾಧ್ಯತೆಯಿಲ್ಲವೆಂದು ನ್ಯಾಯಾಲಯ ತಿಳಿದುಕೊಂಡಿದೆ" ಎಂದು ಹೇಳಿದ ನ್ಯಾಯಮೂರ್ತಿಗಳು ರೂ 30,000 ಬಾಂಡ್‍ನೊಂದಿಗೆ ಆರೋಪಿಯನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News