ರಾಜಕೀಯ ಮಾಡುವುದರಲ್ಲಿ ಬಿಜೆಪಿಯವರನ್ನು ಮೀರಿಸುವರುಂಟೆ?: ದಿನೇಶ್ ಗುಂಡೂರಾವ್

Update: 2021-08-26 16:51 GMT

ಬೆಂಗಳೂರು, ಆ. 26: `ಕಾಂಗ್ರೆಸ್‍ಗೆ ರಾಜಕೀಯದ ಪಾಠ ಮಾಡುವ ಗೃಹ ಸಚಿವ ಆರಗ ಜ್ಞಾನೇಂದ್ರರವರು, ಇವರದ್ದೇ ಕ್ಷೇತ್ರ ತೀರ್ಥಹಳ್ಳಿಯಲ್ಲಿ 2015ರಲ್ಲಿ ನಡೆದ ನಂದಿತಾ ಸಾವಿನ ಪ್ರಕರಣದಲ್ಲಿ ಪೊಲೀಸರಿಂದ ಜಾರ್ಜ್‍ಶೀಟ್ ಹಾಕಿಸಿಕೊಂಡಿದ್ಯಾಕೆ? ಅಂದು ಗಲಭೆ ಎಬ್ಬಿಸಿದ್ದು ರಾಜಕೀಯವಲ್ಲವೆ? ಸಾವಿನಲ್ಲಿ, ಅತ್ಯಾಚಾರದ ವಿಷಯದಲ್ಲಿ ರಾಜಕೀಯ ಮಾಡುವುದರಲ್ಲಿ ಬಿಜೆಪಿಯವರನ್ನು ಮೀರಿಸುವರುಂಟೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದಿರುವ ಆರಗ ಜ್ಞಾನೇಂದ್ರರವರೆ? ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರ ನ್ಯಾಯಕ್ಕಾಗಿ ಹೋರಾಡುವುದು ನಿಮಗೆ ರಾಜಕೀಯದಂತೆ ಕಾಣುತ್ತಿದೆಯೆ? ಹಾಗಾದರೆ ನಿಮ್ಮ ಪಕ್ಷ ಅತ್ಯಾಚಾರಿಗಳ ಪರವೋ ಅಥವಾ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರವೋ?' ಎಂದು ಕೇಳಿದ್ದಾರೆ.

`ಕೊರೋನ ಸಾವುಗಳ ಬಗ್ಗೆ ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ ಎಂಬ ಅನುಮಾನ ನಿಜವಾಗುವಂತಿದೆ. ಸರಕಾರ ಕೊಟ್ಟ ಅಂದಿನ ಲೆಕ್ಕಕ್ಕೂ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಈಗ ಹೇಳುತ್ತಿರುವ ಲೆಕ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಒಂದು ವೇಳೆ ಸರಕಾರ ಸಾವಿನ ಸುಳ್ಳಿನ ಲೆಕ್ಕ ಕೊಟ್ಟಿದ್ದರೆ ಅದು ಅಮಾನವೀಯದ ಜೊತೆಗೆ ಬೇಜವಾಬ್ದಾರಿಯ ಪರಮಾವದಿ'

-ದಿನೇಶ್ ಗುಂಡೂರಾವ್ ಕೆಪಿಸಿಸಿ ಮಾಜಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News