ಜಂತರ್ ಮಂತರ್‌ನಲ್ಲಿ ಪ್ರಚೋದನಕಾರಿ ಘೋಷಣೆ: ತೋಮಾರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ದಿಲ್ಲಿ ಹೈಕೋರ್ಟ್ ನಕಾರ

Update: 2021-08-27 18:36 GMT

ಹೊಸದಿಲ್ಲಿ,ಆ.27: ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಆಗಸ್ಟ್ 8ರಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ ಹಿಂದೂ ರಕ್ಷಾದಳ ಸಂಘಟನೆಯ ನಾಯಕ ಭೂಪೀಂದರ್ ಸಿಂಗ್ ತೋಮಾರ್‌ಗೆ ಬಂಧನವಾಗುವುದರಿಂದ ಮಧ್ಯಂತರ ರಕ್ಷಣೆಯನ್ನು ನೀಡಲು ದಿಲ್ಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಪ್ರಕರಣದ ಕುರಿತ ತನಿಖಾ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾಯಾಧೀಶೆ ಮುಕ್ತಾ ಗುಪ್ತಾ ಅವರು ದಿಲ್ಲಿ ಪೊಲೀಸರಿಗೆ ಸೂಚಿಸಿದರು ಹಾಗೂ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದರು.

ಆಗಸ್ಟ್ 8ರಂದು ಹಿಂದೂ ರಕ್ಷಾ ದಳದ ಕಾರ್ಯಕರ್ತರು ಸಂಸತ್ ಭವನದಿಂದ 2 ಕಿ.ಮೀ. ಕಡಿಮೆ ದೂರದಲ್ಲಿ ನಡೆಸಿದ ರ್ಯಾಲಿಯಲ್ಲಿ ಕೋಮು ಪ್ರಚೋದನಕಾಕಾರಿ ಘೋಷಣೆಗಳನ್ನು ಕೂಗಿದ್ದರು. ಪ್ರಚೋದನಕಾರಿ ಘೋಷಣೆಗಳನ್ನು ರ್ಯಾಲಿಯಲ್ಲಿ ಪ್ರತಿಭಟನಕಾರರು ಕೂಗುತ್ತಿರವುದು ವಿಡಿಯೋದಲ್ಲಿ ಕಾಮಸಿಕ್ಕಿದೆ.

ಚೌಧುರಿ ಅವರ ವಕೀಲ ವಿಷ್ಣು ಶಂಕರ್ ಜೈನ್ ಅವರು ದಿಲ್ಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ ತನ್ನ ಕಕ್ಷಿಯು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿಲ್ಲವೆಂದು ಹೇಳಿದ್ದಾನೆ. ಈ ಕಾರ್ಯಕ್ರಮವನ್ನು ಬಿಜೆಪಿ ನಾಯ ಅಶ್ವಿನಿ ಉಪಾಧ್ಯಾಯ ಆಯೋಜಿಸಿದ್ದು, ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆಯೆಂದು ಅವರು ತಿಳಿಸಿದರು.

ಆದಾಗ್ಯೂ ತನಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ನೀಡುವಂತೆ ಚೌಧುರಿ ಅವರು ನ್ಯಾಯಾಲಯವನ್ನು ಆಗ್ರಹಿಸಲು ಸಾಧ್ಯವಿಲ್ಲವೆಂದು ನ್ಯಾಯಾಧೀಶರು ತಿಳಿಸಿದ್ದಾರೆ.ರ್ಯಾಲಿಯಲ್ಲಿ ಘೋಷಣೆಗಳನ್ನು ಕೂಗಲಾದ ಸಂದರ್ಭ ಚೌಧುರಿಯವರು ಎಲ್ಲಿದ್ದರೆಂಬುದನ್ನು ಕೂಡಾ ನ್ಯಾಯಾಧೀಶೆ ತಿಳಿಯಬಯಸಿದರು. ಆಗ ಚೌಧುರಿಯವರ ವಕೀಲರು ಉತ್ತರಿಸುತ್ತಾ ತನ್ನ ಕಕ್ಷಿದಾರ ಕಾರ್ಯಕ್ರಮದಲ್ಲಿ ಉಪಸ್ಥಿನಿದ್ದರಾದರೂ ಘೋಷಣೆಗಳನ್ನು ಕೂಗುವುದರಲ್ಲಿ ಭಾಗಿಯಾಗಿರಲಿಲ್ಲವೆಂದು ತಿಳಿಸಿದರು.

ಆಗಸ್ಟ್ 21ರಂದು ದಿಲ್ಲಿ ನ್ಯಾಯಾಲಯವು ಚೌಧರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News