ಕೋವಿಡ್ ಸಾವಿನ ಸಂಖ್ಯೆಯಲ್ಲಿ ಇಳಿಕೆ: ರಾಜ್ಯದಲ್ಲಿ ಶನಿವಾರ 1,229 ಮಂದಿಗೆ ಸೋಂಕು, 13 ಸಾವು

Update: 2021-08-28 15:21 GMT

ಬೆಂಗಳೂರು, ಆ.28: ರಾಜ್ಯದಲ್ಲಿ ಕೋವಿಡ್ ಸೋಂಕಿನ ಸಾವಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದ್ದು, ಎಂಟು ಜಿಲ್ಲೆಗಳನ್ನು ಹೊರತುಪಡಿಸಿ ಬೆಂಗಳೂರು ಸೇರಿದಂತೆ ಉಳಿದ ಎಲ್ಲ ಜಿಲ್ಲೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ಶನಿವಾರ ರಾಜ್ಯಾದ್ಯಂತ 1,229 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇಂದು 1,289 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 29,45,993ಕ್ಕೆ ಏರಿಕೆಯಾಗಿದ್ದು, 37261 ಮಂದಿ ಸಾವನ್ನಪ್ಪಿದ್ದಾರೆ. 18,897 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 13 ಮಂದಿ ಸೋಂಕಿಗೆ ಬಲಿಯಾಗಿದ್ದು, ದಕ್ಷಿಣ ಕನ್ನಡ 5, ಹಾಸನ 2, ಬೆಂಗಳೂರು ಗ್ರಾಮಾಂತರ 1, ಚಾಮರಾಜನಗರ 1, ಹಾವೇರಿ 1, ಕೋಲಾರ 1, ಶಿವಮೊಗ್ಗ 1, ಉಡುಪಿ 1 ಸಾವಿನ ಪ್ರಕರಣ ವರದಿಯಾಗಿದೆ.

1229 ಮಂದಿಗೆ ಸೋಂಕು: ಬಳ್ಳಾರಿ 1, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 15, ಬೆಂಗಳೂರು ನಗರ 310, ಚಾಮರಾಜನಗರ 7, ಚಿಕ್ಕಬಳ್ಳಾಪುರ 4, ಚಿಕ್ಕಮಗಳೂರು 35, ಚಿತ್ರದುರ್ಗ 15, ದಕ್ಷಿಣಕನ್ನಡ 207, ದಾವಣಗೆರೆ 12, ಧಾರವಾಡ 7, ಗದಗ 2, ಹಾಸನ 103, ಹಾವೇರಿ 3, ಕಲಬುರಗಿ 2, ಕೊಡಗು 75, ಕೋಲಾರ 15, ಕೊಪ್ಪಳ 2, ಮಂಡ್ಯ 21, ಮೈಸೂರು 82, ರಾಮನಗರ 3, ಶಿವಮೊಗ್ಗ 42, ತುಮಕೂರು 44, ಉಡುಪಿ 146, ಉತ್ತರಕನ್ನಡ 42, ವಿಜಯಪುರ 1 ಸೋಂಕಿತರಾಗಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 310 ಮಂದಿ ಸೋಂಕಿತರಾಗಿದ್ದು, ಯಾವುದೇ ಸಾವು ಆಗಿಲ್ಲ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12,36,925ಕ್ಕೆ ಏರಿಕೆಯಾಗಿದ್ದು, 15,977 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ 7322 ಸಕ್ರಿಯ ಪ್ರಕರಣಗಳಿದ್ದು, ಅವರೆಲ್ಲರೂ ಆಸ್ಪತ್ರೆ, ಕೋವಿಡ್ ಸೆಂಟರ್, ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News