ಪ್ರಧಾನಿ ಮೋದಿಯವರು ಸವಾಲುಗಳಿಗೆ ಹೆದರಿ ಓಡಿ ಹೋಗುವವರಲ್ಲ: ಸಿ.ಟಿ.ರವಿ

Update: 2021-09-05 12:59 GMT

ಚಿಕ್ಕಮಗಳೂರು, ಸೆ.5: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸವಾಲುಗಳನ್ನು ಧೈರ್ಯವಾಗಿ ಎದುರಿಸುವವರೇ ಹೊರತು, ಹೆದರಿ  ಓಡಿ ಹೋಗುವವರಲ್ಲ ಎಂದು ಬಿಜೆಪಿ ರಾ ಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ರವಿವಾರ ನಗರದ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿರುವ ಆಕ್ಸಿಜನ್ ಉತ್ಪಾದಕ ಘಟಕವನ್ನು ಪರಿಶೀಲಿಸಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ಮೊದಲ ಅಲೆ ಕಾಣಿಸಿ ಕೊಂಡಾಗ ಆಕ್ಸಿಜನ್ ಬೇಡಿಕೆ ಅಷ್ಟಾಗಿ ಇರಲಿಲ್ಲ, 2ನೇ ಅಲೆ ಸಂದರ್ಭದಲ್ಲಿ ಭಾರೀ ಬೇಡಿಕೆ ಬಂತು, ಆಗ ಆರಂಭದಲ್ಲಿ ದೇಶ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಯಿತು. ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಬಾರದು ಎಂದು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ ಎಂದರು.

ಆಕ್ಸಿಜನ್ ಪ್ಲಾಂಟ್‍ಗಳನ್ನು ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಿಗೆ ಮಂಜೂರು ಮಾಡಿದ್ದು, ಕೇಂದ್ರ ಸರಕಾರ ಪ್ರಧಾನಮಂತ್ರಿ ನಿಧಿಯಿಂದ ಪ್ರತಿಯೊಂದು ಘಟಕ ನಿರ್ಮಾಣಕ್ಕೆ 1ಕೋಟಿ, 22ಲಕ್ಷ ರೂ. ಅನುದಾನ ನೀಡಿದ್ದು, ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದೊಂದಿಗೆ ಜಿಲ್ಲಾಸ್ಪತ್ರೆ ಆತ್ಮನಿರ್ಭರವಾಗಿ ದೆ. ಇಲ್ಲಿ 1 ನಿಮಿಷಕ್ಕೆ 960 ಲೀ. ಆಕ್ಸಿಜನ್ ಉತ್ಪಾದನೆಯಾಗಲಿದೆ. ಜಿಲ್ಲಾಸ್ಪತ್ರೆಗೆ ದಿನಕ್ಕೆ 560 ಲೀ. ಆಕ್ಸಿಜನ್ ಅಗತ್ಯವಿದ್ದು, 400 ಲೀಟರ್‍ಗೂ ಹೆಚ್ಚು ಆಕ್ಸಿಜನ್ ಉಳಿತಾಯವಾಗಲಿದೆ. ಇದರಿಂದ ಹೆಚ್ಚುವರಿ ವೆಂಟಿಲೇಟರ್ ಗಳ ಬೆಡ್ ಅಳವಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ 2000 ಆಕ್ಸಿಜನ್ ಪ್ಲಾಂಟ್ ಯುನಿಟ್‍ಗಳನ್ನು ಮಂಜೂರು ಮಾಡಿದ್ದು, ಈ ವಾರದಲ್ಲೇ ಉದ್ಘಾಟನೆಯಾಗುವ ನಿರೀಕ್ಷೆ ಇದೆ. ಜಿಲ್ಲಾಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಪ್ಲಾಂಟ್ ಸರ್ವ ಸನ್ನದ್ಧವಾಗಿದ್ದು, 3ಬಾರೀ ಟ್ರಯಲ್ ಕೂಡ ನೋಡಲಾಗಿದೆ. ಜೊತೆಗೆ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ಕೂಡ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿದ್ದು, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗುವುದಿಲ್ಲ ಎಂದ ಅವರು, ಜಿಲ್ಲಾಸ್ಪತ್ರೆ ಸೇರಿದಂತೆ ಕಡೂರು, ಕೊಪ್ಪ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಉತ್ಪಾದನ ಘಟನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಪ್ಲಾಂಟ್‍ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News