ಗಾಂಧಿ ಟೋಪಿ ಗಾಂಧೀಜಿ ಧರಿಸುತ್ತಿರಲಿಲ್ಲ ನೆಹರು ಧರಿಸುತ್ತಿದ್ದರು ಎಂದ ಬಿಜೆಪಿ ನಾಯಕ

Update: 2021-09-07 06:28 GMT

ಅಹಮದಾಬಾದ್: ಮಹಾತ್ಮಾ ಗಾಂಧಿ ಎಂದಿಗೂ ಅವರ ಹೆಸರಿನ ಕ್ಯಾಪ್ ಧರಿಸಿಲ್ಲ. ಆದರೆ ಜವಾಹರಲಾಲ್ ನೆಹರೂ ಅದನ್ನು ಧರಿಸುತ್ತಿದ್ದರು ಎಂದು ಹೊಸದಾಗಿ ನೇಮಕಗೊಂಡ ಗುಜರಾತ್ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಅವರು ಹೇಳಿದ್ದಾರೆ. ಈ ಮಾತನ್ನು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಸೋಮವಾರ ಸಮರ್ಥಿಸಿಕೊಂಡರು. ಇದನ್ನು 'ಗಾಂಧಿ ಟೋಪಿ' ಎಂದು ಕರೆಯಲಾಗುತ್ತದೆ. ಆದರೆ ಇದನ್ನು ರಾಷ್ಟ್ರಪಿತ ಗಾಂಧೀಜಿ ಧರಿಸಿದ್ದನ್ನು ಯಾರೂ ನೋಡಿಲ್ಲ ಎಂದರು.

"ಗಾಂಧೀಜಿ ಆ ಗಾಂಧಿ ಕ್ಯಾಪ್ ಧರಿಸಿರುವ ಫೋಟೊವನ್ನು ಯಾರೂ ನೋಡಿಲ್ಲ ಗಾಂಧೀಜಿ ಗಾಂಧಿ ಕ್ಯಾಪ್ ಧರಿಸಿರುವ ಫೋಟೋವನ್ನು ನಾನು ಕೂಡ ನೋಡಿಲ್ಲ. ರತ್ನಾಕರ್ ಹೇಳಿರುವ ಮಾತು ಸತ್ಯ’’  ಎಂದು ಪಟೇಲ್ ಗಾಂಧಿನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕ್ಯಾಪ್ ಅನ್ನು 'ಗಾಂಧಿ ಟೋಪಿ' ಎಂದು ಏಕೆ ಕರೆಯುತ್ತಾರೆ. ಅದನ್ನು ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಧರಿಸಿದ್ದರು. ಆದರೆ ಮಹಾತ್ಮ ಗಾಂಧಿ ಧರಿಸಿರಲಿಲ್ಲ ಎಂದು  ಇತ್ತೀಚೆಗೆ ಗುಜರಾತ್ ಬಿಜೆಪಿಯ ಹೊಸ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ರತ್ನಾಕರ್ ಅವರು ರವಿವಾರ ಟ್ವೀಟ್ ಮಾಡಿದ್ದರು.

ಕ್ಯಾಪ್ ಧರಿಸದ ಗಾಂಧೀಜಿಯವರ ಫೋಟೋದೊಂದಿಗೆ ಕ್ಯಾಪ್ ಧರಿಸಿದ್ದ ನೆಹರು ಫೋಟೋವನ್ನು ಬಿಜೆಪಿ ನಾಯಕ ಹಂಚಿಕೊಂಡಿದ್ದರು.

ಬಿಜೆಪಿ ನಾಯಕನ ಟ್ವೀಟ್ ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಗುಜರಾತ್ ಕಾಂಗ್ರೆಸ್, ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಭಾಗವಹಿಸದ ಹಾಗೂ ಬ್ರಿಟಿಷರ ಪರವಾಗಿ ನಿಂತ ಜನರು ಈಗ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತದ ಮೊದಲ ಪ್ರಧಾನಿಯತ್ತ ಬೆರಳು ತೋರಿಸುತ್ತಿದ್ದಾರೆ ಎಂದು ಹೇಳಿದೆ.

"ಬ್ರಿಟಿಷ್ ಟೋಪಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಜನರು ಗುಜರಾತ್‌ಗೆ ಬಂದ ನಂತರ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತದ ಮೊದಲ ಪ್ರಧಾನ ಮಂತ್ರಿಗಳ ಬಗ್ಗೆ ಇಂತಹ ಟೀಕೆಗಳನ್ನು ಮಾಡುತ್ತಿದ್ದಾರೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News