ಹರ್ಯಾಣ: ಮಿನಿ-ಸಚಿವಾಲಯದತ್ತ ತೆರಳಲು ರೈತರ ಯೋಜನೆ, ಭಾರೀ ಭದ್ರತೆ

Update: 2021-09-07 09:50 GMT

ಕರ್ನಾಲ್(ಹರ್ಯಾಣ): ಹರ್ಯಾಣ ದ ಕರ್ನಾಲ್‌ನಲ್ಲಿ ರೈತರು ಇಂದು ಮಹಾಪಂಚಾಯತ್ ನಡೆಸಲಿದ್ದು, ಆಗಸ್ಟ್ 28 ರಂದು ಪೊಲೀಸರು ರೈತರ ಮೇಲೆ ನಡೆಸಿದ್ದ ಲಾಠಿಚಾರ್ಜ್ ವಿರೋಧಿಸಿ ಮಿನಿ- ಸಚಿವಾಲಯದತ್ತ ತೆರಳಲು ರೈತರು ಯೋಜಿಸಿದ್ದಾರೆ. ಹೀಗಾಗಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಲ್‌ನಲ್ಲಿ ಹರ್ಯಾಣ ಪೊಲೀಸ್ ಹಾಗೂ ಕೇಂದ್ರ ಪಡೆಗಳ ಭಾರೀ ನಿಯೋಜನೆ ಮಾಡಲಾಗಿದೆ, ಆದರೆ ಕರ್ನಾಲ್‌ನ ಹೊಸ ಅನಾಜ್ ಮಂಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಲ್ಲಿ ರೈತರು ಒಟ್ಟಾಗಲಿದ್ದು, ಮಿನಿ-ಸೆಕ್ರೆಟರಿಯೇಟ್ ಕಡೆಗೆ ಹೋಗಲು ಯೋಜಿಸಿದ್ದಾರೆ ಎಂದು ಅವರು ಹೇಳಿದರು.

ದಿಲ್ಲಿ-ಕರ್ನಾಲ್-ಅಂಬಾಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ ವಾಹನ ಸಂಚಾರ ಸಾಮಾನ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಾಜ್ ಮಂಡಿಯಲ್ಲಿ ಶಾಂತಿಯುತವಾಗಿ ಒಟ್ಟು ಸೇರಬೇಕೆಂದು ರೈತರಿಗೆ ಹರ್ಯಾಣ ಬಿಕೆಯು (ಚಾದುನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚಾದುನಿ ಅವರು ಮನವಿ ಮಾಡಿದ್ದಾರೆ.

"ನಾವು ಹೊಸ ಅನಾಜ್ ಮಂಡಿಯಲ್ಲಿ ಮಹಾಪಂಚಾಯತ್ ನಡೆಸುತ್ತೇವೆ’’ ಎಂದು ಅವರು ಹೇಳಿದ್ದಾರೆ.

ವರದಿಗಳ ಪ್ರಕಾರ, ರೈತರು ಹೊಸ ಅನಾಜ್ ಮಂಡಿಗೆ ತೆರಳಲು ಆರಂಭಿಸಿದ್ದಾರೆ ಹಾಗೂ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಕೂಡ ಕರ್ನಾಲ್ ನತ್ತ ತೆರಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News