ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2021-22ನೇ ಸಾಲಿನ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಕಟ

Update: 2021-09-07 15:40 GMT

ಬೆಂಗಳೂರು, ಸೆ.7: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2021-22ನೇ ಸಾಲಿನ ಗೌರವ ಪ್ರಶಸ್ತಿಗೆ ಶಿವಮೊಗ್ಗದ ಕತಾಕೀರ್ತನಕಾರ ಎಸ್.ಎಸ್.ಶಿವಾನಂದಸ್ವಾಮಿ ಹಾಗೂ ಬೆಂಗಳೂರಿನ ಗಮಕ ವಾಚನಕಾರ ಎಂ.ಆರ್.ರಾಮಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿಯ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅಧ್ಯಕ್ಷತೆಯಲ್ಲಿ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದ್ದು, ಗೌರವ ಪ್ರಶಸ್ತಿಯು 50ಸಾವಿರ ರೂ. ಹಾಗೂ ವಾರ್ಷಿಕ ಪ್ರಶಸ್ತಿ 25ಸಾವಿರ ರೂ. ಗೌರವಧನವನ್ನು ಒಳಗೊಂಡಿದೆ.

ಗೌರವ ಪ್ರಶಸ್ತಿ ಪಟ್ಟಿ

ಕರ್ನಾಟಕ ಸಂಗೀತ: ಹೊಸನಗರದ ಎಚ್.ಕೆ.ಬಾಲಕೃಷ್ಣರಾವ್(ಹಾಡುಗಾರಿಕೆ), ಶಿವಮೊಗ್ಗದ ಎಚ್.ಎಸ್.ನಾಗರಾಜ್(ಹಾಡುಗಾರಿಕೆ), ಬೆಂಗಳೂರಿನ ಟಿ.ಎಸ್.ಚಂದ್ರಶೇಖರ್(ಮೃದಂಗ) ಹಾಗೂ ಚಾಮರಾಜನಗರದ ರಂಗಸ್ವಾಮಿ(ನಾದಸ್ವರ) ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನಿ ಸಂಗೀತ: ಬಾಗಲಕೋಟೆಯ ಅಪ್ಪಣ್ಣಾ ರಾಮಚಂದ್ರ ಶಿರೋಳ(ಗಾಯನ), ಹುಬ್ಬಳ್ಳಿಯ ಬಾಲಚಂದ್ರ ನಾಕೋಡ್(ಗಾಯನ), ಕೊಪ್ಪಳದ ದೇವೇಂದ್ರಕುಮಾರ್ ಪತ್ತಾರ(ಗಾಯನ) ಹಾಗೂ ಬೆಳಗಾವಿಯ ಡಿ.ಎಸ್.ಚಾಳೇಕರ್(ಸಿತಾರ) ಆಯ್ಕೆಯಾಗಿದ್ದಾರೆ.

ನೃತ್ಯ: ದಕ್ಷಿಣ ಕನ್ನಡದ ಕಮಲಾಕ್ಷ ಆಚಾರ್, ಬೆಂಗಳೂರಿನ ಪದ್ಮಜಾ ಸುರೇಶ್, ಬೆಂಗಳೂರಿನ ವಿದ್ಯಾ ರವಿಶಂಕರ್, ಬಾಲಸುಬ್ರಹ್ಮಣ್ಯಂ ಶರ್ಮ ಆಯ್ಕೆಯಾಗಿದ್ದಾರೆ. ಸುಗಮ ಸಂಗೀತದಲ್ಲಿ ಮೈಸೂರಿನ ಇಂದ್ರಾಣಿ ಅನಂತರಾಂ, ಕಾಸರಗೋಡಿನ ವಸಂತಕುಮಾರ ಕುಂಬ್ಳೆ ಆಯ್ಕೆಯಾಗಿದ್ದಾರೆ.

ಗಮಕದಲ್ಲಿ ಚಿಕ್ಕಮಗಳೂರಿನ ಕೆ.ವಿ.ಚಂದ್ರಮೌಳಿ ಹಾಗೂ ಹೊರದೇಶ ಕನ್ನಡ ಕಲಾವಿದರ ವಿಭಾಗದಲ್ಲಿ ಸ್ವಿಝರ್‍ಲ್ಯಾಂಡ್‍ನ ಡಿ.ಕೇಶವ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News