ಎಂ.ಜಿ.ಟಿ ಸಂಸ್ಥೆಯ ರಾಷ್ಟ್ರೀಯ ಸಮಿತಿ ಅಸ್ತಿತ್ವಕ್ಕೆ, ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ

Update: 2021-09-08 14:13 GMT

ಚಿಕ್ಕಮಗಳೂರು : ಮಲ್ನಾಡ್ ಗಲ್ಫ್ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಇದರ ನೂತನ ರಾಷ್ಟ್ರೀಯ ಸಮಿತಿಯ ರಚನೆಯು ನಗರದ ರಾಜಮಹಲ್ ಆರ್ಕಿಡ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭ ಕೋವಿಡ್ ವಾರಿಯರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಸಹಲ್ ಬಿನ್ ಸಮೀರ್ ಕಿರಾಅತ್ ಪಠಣದೊಂದಿಗೆ ಪ್ರಾರಂಭಿಸಲಾಯಿತು. ಚಿಕ್ಕಮಗಳೂರು ಬದ್ರಿಯಾ ಜುಮಾ ಮಸೀದಿಯ ಶರೀಫ್ ಸಖಾಫಿ ದುಆ ಮತ್ತು ಆಶೀರ್ವಚನ ನೆರವೇರಿಸಿ ಮಾತನಾಡಿ, ಪವಿತ್ರ ಕುರ್ ಆನ್ ನಲ್ಲಿ ತಿಳಿಸಿದಂತೆ ನಿಮ್ಮ- ನಿಮ್ಮ ಊರಿನಲ್ಲಿರುವ ಬಡವರನ್ನು, ಅನಾಥರನ್ನು ಪರಿಗಣಿಸಿ ಅವರಿಗೆ ಸಹಾಯ ಮಾಡಿ ಅವರನ್ನು ಸಂರಕ್ಷಿಸುವುದು, ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ  ಶೈಕ್ಷಣಿಕವಾಗಿಯೂ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್  ಸ್ವಾಗತಿಸಿದರು.

ಟ್ರಸ್ಟಿ ಮತ್ತು ಹಿರಿಯ ಸಲಹೆಗಾರರಾದ ನಿಯಾಝ್ ಅಹ್ಮದ್ ಚಿಕ್ಕಮಗಳೂರು ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್ ನ ಮುಖ್ಯ ಉದ್ದೇಶವು ನಮ್ಮ ಊರಿನ, ನಮ್ಮ ಜನಾಂಗದ ಕೂಲಿ ಕಾರ್ಮಿಕರು, ಬಡವರು, ವಿದ್ಯಾಭ್ಯಾಸ ವಂಚಿತರಿಗೆ ಅವಕಾಶಗಳನ್ನು ಕಲ್ಪಿಸಲು ನಾವು ದುಡಿದ ದುಡಿಮೆಯ ಒಂದು ಭಾಗವನ್ನು ನೀಡಿ ಅವರನ್ನು ಸಹಾಯ ಮಾಡುವುದಾಗಿದ್ದು, ಕಳೆದ ಏಳು ವರ್ಷಗಳಿಂದ ಹಲವಾರು  ಸದಸ್ಯರು  ಈ ಸಂಘಟನೆಯಲ್ಲಿ ಅವಿರತವಾಗಿ ದುಡಿಯುತ್ತಿದ್ದು, ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡಿ ಮುನ್ನಡೆಸಲಾಗುತ್ತಿದೆ ಎಂದರು.

ಕೆಲವು ಸದಸ್ಯರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರೂ ಅವರಿಂದಾಗುವ ಸಹಾಯ ಮಾಡಿ ಸಂಘಟನೆಯ ಅಭಿವೃದ್ಧಿಗೆ ಸಹಕಾರ ನೀಡುತ್ತಾ ಬಂದಿರುವ ಸದಸ್ಯರನ್ನು ಅಭಿನಂದಿಸುತ್ತಾ, ಯಾವುದೇ ರಾಜಕೀಯ ಉದ್ದೇಶವಿಟ್ಟುಕೊಂಡು ಅಧಿಕಾರದ ವ್ಯಾಮೋಹಕ್ಕಾಗಿ ಈ ಸಂಘಟನೆಗೆ ಸೇರಬೇಡಿ ಎಂಬ  ಕಿವಿಮಾತನ್ನು ಹೇಳಿ ಎಲ್ಲರಿಗೂ ಶುಭ ಹಾರೈಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಕಳಸ ಮಾತನಾಡಿ ನಾಲ್ಕೂ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ನೂತನ ಸದಸ್ಯರನ್ನು ಅಭಿನಂದಿಸಿ, ಹೊಸ ರಾಷ್ಟ್ರೀಯ ಸಮಿತಿ  ರಚನೆಯ ಸಂದರ್ಭದಲ್ಲಿ ನಮ್ಮ ಸಂಘಟನೆಯಲ್ಲಿ ಹೆಚ್ಚು ಅನುಭವವಿರುವ ಹಿರಿಯ ನಾಯಕರನ್ನೇ ಚುಕ್ಕಾಣಿ ಹಿಡಿಯಲು ನೀವು ಆಯ್ಕೆ ಮಾಡಿ ಎಂದು ಹೇಳಿದರು.

ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಬಶೀರ್ ಬಾಳ್ಳುಪೇಟೆ ಮಾತನಾಡಿ , ಮಾರ್ಚ್ 2014ರಂದು ಸಣ್ಣದಾಗಿ ಕೆಲವೇ ಸದಸ್ಯರು ಸೇರಿಕೊಂಡು  ಪ್ರಾರಂಭವಾದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಇಂದು 2021ರಲ್ಲಿ ಮಲ್ನಾಡ್ ಗಲ್ಫ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಆಗಿ ಪರಿವರ್ತಿತಗೊಂಡು ಹೆಮ್ಮರವಾಗಿ ಬೆಳೆದಿದ್ದು, ಸಂಘಟನೆಯ ಮುಖ್ಯ ಉದ್ದೇಶ ಶೈಕ್ಷಣಿಕವಾಗಿ ಎಲ್ಲರನ್ನೂ ಸಬಲರನ್ನಾಗಿಸುವುದು, ಆರೋಗ್ಯದ ದೃಷ್ಟಿಯಿಂದ ತುರ್ತು  ಚಿಕಿತ್ಸಾ ಸಂದರ್ಭದಲ್ಲಿ ಧನ ಸಹಾಯ ಮಾಡುವುದು, ರಮದಾನ್ ಕಿಟ್ ವಿತರಣೆ ಇನ್ನಿತರ ಸಾಮಾಜಿಕ ಕಳಕಳಿಯಿಟ್ಟು  ಈ ಸಂಘಟನೆಯನ್ನು ಪ್ರಾರಂಭಿಸಲಾಯಿತು ಎಂದು ತಿಳಿಸಿದರು. 2017ರ ಮಹಾ ಜಲ ಪ್ರಳಯ ಸಂದರ್ಭದಲ್ಲಿ ಸಂಘಟನಯು ಮಲೆನಾಡಿನಲ್ಲಿ ನಡೆಸಿದ ಹಲವು ಜನಪರ ಕಾರ್ಯಗಳನ್ನು ನೆನೆಸಿಕೊಂಡರು.

ಹಿರಿಯ ಸಲಹೆಗಾರರಾದ  ಫಾರೂಕ್ ಅರಬ್ ಎನರ್ಜಿ ಮಾತನಾಡಿ, ಗಲ್ಫ್ ರಾಷ್ಟ್ರಗಳಲ್ಲಿ ಸಂಘಟನೆಯ ಸಾಮಾಜಿಕ ಕಾರ್ಯಕ್ರಮಗಳನ್ನು ವಿವರಿಸಿ ಸಂಪೂರ್ಣ ಕಾರ್ಯಚಟುವಟಿಕೆಗಳ ವಿವರಣೆಯನ್ನು ನೀಡಿ ಎಲ್ಲರೂ ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಿ ಎಂದು ಕೇಳಿಕೊಂಡರು.

ಕೇಂದ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫಿ ಮಾತನಾಡಿ ಎಲ್ಲಾ ಜಿಲ್ಲೆಗಳಿಂದ ಆಗಮಿಸಿರುವ ಎಲ್ಲಾ ಪದಾಧಿಕಾರಿಗಳನ್ನು, ಕೇಂದ್ರ ಸಮಿತಿಯ ಸದಸ್ಯರನ್ನು ಕೃತಜ್ಞತೆ ಸಲ್ಲಿಸುತ್ತಾ, ಕೊರೋನ ಸಂಕಷ್ಟದ ಈ ಸಮಯದಲ್ಲಿ ಸಂಘಟನೆಯ ಮೂಲ ಉದ್ದೇಶದಂತೆ ನಾವುಗಳು ಜನರೊಂದಿಗೆ ಕೈಜೋಡಿಸಿ ಅವರ ಕಷ್ಟಗಳಿಗೆ ಸ್ಪಂದಿಸುತ್ತ ನಿರ್ಗತಿಕರಿಗೆ ಸಹಾಯ ಮಾಡೋಣ ಎಂದರು.

ನೂತನ ರಾಷ್ಟ್ರೀಯ ಸಮಿತಿಯ ರಚನೆಯು ಒಂದು ದೊಡ್ಡ ಆಶಯವಾಗಿದ್ದು, ಅದನ್ನು ಇಂದಿನ ದಿನ ಸಾಕಾರಗೊಳಿಸಿ ಸಂಘಟನೆಯನ್ನು ಎಲ್ಲಾ ಮಲೆನಾಡಿನ ಮೂಲೆ ಮೂಲೆಗೂ ತಲುಪಿಸೋಣ, ನಾವು ಮಾಡುವ ಸತ್ಕರ್ಮಗಳು ಪರಲೋಕಕ್ಕೆ ಸಹಕಾರಿಯಾಗಿರಲಿ ಎಂಬ ಆಶಯದೊಂದಿಗೆ ಕೆಲಸ ಮಾಡೋಣ ಎಂದು ಎಲ್ಲರಿಗೂ ಶುಭ ಹಾರೈಸಿದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಿರಾಜುದ್ದೀನ್ ಚಕ್ಕಮಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿಯ ಅಂತರ್ ರಾಷ್ಟ್ರೀಯ ಸಂಚಾಲಕರು ಮತ್ತು ದಮಾಮ್ -ಖೋಬರ್ ಘಟಕದ ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ ಕಾರ್ಯಕ್ರಮ ನಿರೂಪಿಸಿ, ಇಂದಿನ ಸಭೆಯ ಸಂಪೂರ್ಣ ಉದ್ದೇಶವನ್ನು ವಿವರಿಸಿದರು.

ರಿಯಾದ್ ಘಟಕದ ಕಾರ್ಯದರ್ಶಿ ನಝೀರ್ ಮಾಡತ್ತಿಲ್, ಸಮೀರ್ ಹಾಸನ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ ವಾಹಿದ್ ಅಹ್ಮದ್ ಮಾಗುಂಡಿ, ಕೊಡಗು ಜಿಲ್ಲಾಧ್ಯಕ್ಷ ಬಿ.ಎಂ ಅಶ್ರಫ್, ಹಾಸನ ಜಿಲ್ಲಾಧ್ಯಕ್ಷ ಹಸೈನಾರ್ ಆನೆಮಹಲ್, ಶಿವಮೊಗ್ಗ ಜಿಲ್ಲಾಧ್ಯಕ್ಷ ಆರ್.ಎ. ಮೊಹಿಯುದ್ದೀನ್ ರಂಜದಕಟ್ಟೆ, ರಿಯಾದ್ ಘಟಕದ ಅಧ್ಯಕ್ಷ ಜುನೈದ್ , ಜುಬೈಲ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಹಂಡುಗೋಳಿ, ಜಿದ್ದಾ ಘಟಕದ ಅಧ್ಯಕ್ಷ ಮುಸ್ತಾಕ್ ಗಬ್ಗಲ್ , ಜುಬೈಲ್ ಘಟಕದ ಗೌರವಾಧ್ಯಕ್ಷ ಶಮೀಮ್ ಮೂಡಿಗೆರೆ, ದಮಾಮ್ ಖೋಬರ್ ಘಟಕದ ಉಪಾಧ್ಯಕ್ಷ ಹನೀಫ್ ಬಿಳಗುಳ, ದಮಾಮ್ -ಖೋಬರ್ ಘಟಕದ ಕಾರ್ಯದರ್ಶಿ ಅಸ್ಗರ್ ತಲಗೂರು, ಮೀಡಿಯಾ ವಿಭಾಗದ ಅಸ್ಗರ್ ಚಕ್ಕಮಕ್ಕಿ, ಜಿದ್ದಾ ಘಟಕದ ಕಾರ್ಯದರ್ಶಿ ಇಕ್ಬಾಲ್ ಗಬ್ಗಲ್, ಜುಬೈಲ್ ಘಟಕದ ಕಾರ್ಯದರ್ಶಿ ಅಬ್ದುಲ್ ಲತೀಫ್ ಶಾಂತಿಪುರ, ಚಿಕ್ಕಮಗಳೂರು ತಾಲೂಕು ಸಮಿತಿ ಅಧ್ಯಕ್ಷ ಅಕ್ಬರ್ ಕೆ.ಎಮ್  ಸಿಲಿಕಾನ್, ಬಾಳೆಹೊನ್ನೂರು ವಲಯಾಧ್ಯಕ್ಷ  ಜಮೀರ್ ಮೂಸಬ್ಬ ಉಪಸ್ಥಿತರಿದ್ದರು.

ರಾಷ್ಟ್ರೀಯ ಸಮಿತಿಯ ನೂತನ ಸಮಿತಿಯ ರಚನೆಯ ಚುನಾವಣಾಧಿಕಾರಿಯಾಗಿ  ಅಬ್ದುಲ್ ಸತ್ತಾರ್ ಜಯಪುರ  ಕಾರ್ಯನಿರ್ವಹಿಸಿದರು. ಸಮಿತಿಯ  ನೂತನ ಅಧ್ಯಕ್ಷರಾಗಿ ಅಕ್ರಮ್ ಹಾಜಿ ಮೂಡಿಗೆರೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ಜನ್ನತ್ ಕೊಡಗು ಮತ್ತು ಗೌರವಾಧ್ಯಕ್ಷರಾಗಿ ಯೂಸುಫ್ ಹಾಜಿ ಚಿಕ್ಕಮಗಳೂರು ಮತ್ತು ಖಜಾಂಜಿಯಾಗಿ  ಹಸೈನಾರ್ ಆನೆಮಹಲ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಮತ್ತು ಚಿಕ್ಕಮಗಳೂರು ಜಿಲ್ಲಾ ಹಾಗೂ ತಾಲೂಕು ಸಮಿತಿಯ ಸಹಯೋಗದೊಂದಿಗೆ ಕೋವಿಡ್ ಸಂದರ್ಭದಲ್ಲಿ ತಮ್ಮ  ಜೀವದ ಹಂಗು ತೊರೆದು ನಿರಂತರ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜಿಲ್ಲೆಯ ಸುಮಾರು 25ಕ್ಕೂ ಹೆಚ್ಚು ಅರ್ಹ ಸಾಧಕರನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಸಂಘಟನೆಯ ಸಲಹಾ ಮಂಡಳಿ ಸದಸ್ಯರಾದ ಕೆ. ಮಹಮ್ಮದ್ (ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಮತ್ತು ಮಾಜಿ ಬ್ಯಾರಿ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರು ), ನಾಸಿರ್ ಇಂಫಾಲ್, ಅಬ್ದುಲ್  ಅಝೀಝ್ ಕರಾವಳಿ, ಮುಸ್ತಾಕ್ ಅಹ್ಮದ್ (ಅಲ್ ಆರೀಫ್  ಕಂಪನಿ ) ಮತ್ತು ಮಾಜಿ ನಗರ ಸಭಾ ಸದಸ್ಯರಾದ ನೂರ್ ಮಹಮ್ಮದ್ (ಬದ್ರು ), ಈ ಕಾರ್ಯಕ್ರಮದ ಆಯೋಜನೆ ಮತ್ತು ಸಂಘಟನೆಗಾಗಿ ಶ್ರಮಿಸಿದ ತಾಲೂಕು ಸಮಿತಿ ಅಧ್ಯಕ್ಷರಾದ ಅಕ್ಬರ್ ಕೆ.ಎಮ್  ಸಿಲಿಕಾನ್, ಚಿಕ್ಕಮಗಳೂರು ತಾಲೂಕು ಉಪಾಧ್ಯಕ್ಷರಾದ ಅಸ್ಗರ್ ಗ್ಯಾಲಕ್ಸಿ, ಕಾರ್ಯದರ್ಶಿ ಅಲ್ತಾಫ್ ಆಡಿಟರ್, ಸ್ಥಾಪಕ ಸದಸ್ಯ ಮತ್ತು ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷ ಹಮೀದ್ ಸಬ್ಬೇನಹಳ್ಳಿ ಮತ್ತು ರಾಷ್ಠ್ರೀಯ ಸಲಹೆಗಾರರಾದ ಬಿಎಸ್ ಮಹಮದ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಕೊನೆಗೆ ನೂತನ ರಾಷ್ಟ್ರೀಯ ಅಧ್ಯಕ್ಷರಾದ ಅಕ್ರಮ್ ಹಾಜಿ ಮೂಡಿಗೆರೆ  ಮತ್ತು ಪ್ರಧಾನ ಕಾರ್ಯದರ್ಶಿ ನೌಶಾದ್ ಜನ್ನತ್ ಕೊಡಗು ನೇತೃತ್ವದಲ್ಲಿ ಪ್ರಥಮ ಕಾರ್ಯಕಾರಿಣಿ ಸಭೆ ನಡೆಯಿತು.

ಅಧ್ಯಕ್ಷರಾದ ಅಕ್ರಮ್ ಹಾಜಿ ಮಾತನಾಡಿ ಸಂಘಟನೆಯ ಧ್ಯೇಯೋದ್ದೇಶದಂತೆ ಕೇಂದ್ರ ಸಮಿತಿಯ ಎಲ್ಲ ಕಾರ್ಯಗಳಿಗೆ ಸಹಕಾರ ನೀಡಿ ಅವರ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಪಧಾದಿಕಾರಿಗಳು ಪ್ರೀತಿ ವಿಶ್ವಾಸದಿಂದಿದ್ದು ಸಮುದಾಯದ ಏಳಿಗೆಗಾಗಿ ನಾವೆಲ್ಲರೂ  ಕೈಜೋಡಿಸಿ ರೋಗಿಗಳ, ನೊಂದವರ, ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿರೋಣ  ಎಂದು ಶುಭ ಹಾರೈಸಿದರು.

ಕಾರ್ಯದರ್ಶಿಗಳಾದ ನೌಶಾದ್ ಜನ್ನತ್ ಕೊಡಗು ಮಾತನಾಡಿ, ಕಳೆದ ಹಲವು ವರ್ಷಗಳಿಂದ ಕೊಡಗಿನಲ್ಲಿ ಎಂ.ಜಿ.ಟಿ. ಸಂಸ್ಥೆಯ ಧೈಯೋದ್ದೇಶಗಳನ್ನು  ಕಾರ್ಯಗತಗೊಳಿಸಲು ಯಶಸ್ವಿಯಾಗಿದ್ದ ನಮಗೆ ಇದೀಗ ರಾಷ್ಟ್ರೀಯ ಸಮಿತಿಯಲ್ಲಿ ಸ್ಥಾನ ಕೊಟ್ಟು ರಾಷ್ಟ್ರ ಮಟ್ಟದಲ್ಲಿ ಸೇವೆ ಮಾಡಲು ಅವಕಾಶ ನೀಡಿದ್ದಕ್ಕೆ ಕೇಂದ್ರ ಸಮಿತಿಗೆ ಧನ್ಯವಾದಗಳು ಅರ್ಪಿಸುತ್ತಾ ಸಂಸ್ಥೆಯ ಮುಖ್ಯ ಧೈಯೋದ್ದೇಶಗಳಲ್ಲೊಂದಾದ ಶಿಕ್ಷಣಕ್ಕೆ ಇನ್ನಷ್ಟು ಒತ್ತುಕೊಟ್ಟು, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ, ಸಮಾಜದ ಬಡ ವಿದ್ಯಾರ್ಥಿಗಳಗೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಕಾರಣ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೆ ಕೊಡುತ್ತದೆ ಎಂದು ಹಿರಿಯರು ಹೇಳಿದ್ದನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು.

ಸಂಘಟನೆಯ ಸ್ಥಾಪಕ ಸದಸ್ಯರೂ,ರಾಷ್ಟ್ರೀಯ ಸಮಿತಿಯ ಸಹ ಕಾರ್ಯದರ್ಶಿಯಾದ ಹಸ್ಸನ್ ಕೊಟ್ಟಿಗೆಹಾರ ವಂದಿಸಿದರು.

ನೂತನ ರಾಷ್ಟ್ರೀಯ ಸಮಿತಿ  ಕಾರ್ಯನಿರ್ವಾಹಕ ಮಂಡಳಿ

ಗೌರವಾಧ್ಯಕ್ಷರು : ಯೂಸುಫ್ ಹಾಜಿ ಚಿಕ್ಕಮಗಳೂರು
ಅಧ್ಯಕ್ಷರು : ಅಕ್ರಮ್ ಹಾಜಿ ಮೂಡಿಗೆರೆ
ಪ್ರಧಾನ ಕಾರ್ಯದರ್ಶಿ : ನೌಶಾದ್ ಜನ್ನತ್-ಕೊಡಗು
ಉಪಾಧ್ಯಕ್ಷರು : ಅಶ್ರಫ್ ಬಿ.ಎಂ. ಕೊಡಗು, ಡಿಎಸ್ ಅಬ್ದುಲ್ ರಹ್ಮಾನ್ ನ್ಯಾಷನಲ್ ಗ್ರೂಪ್, ತೀರ್ಥಹಳ್ಳಿ, ಆರಿಫ್ ಹಾಸನ
ಸಹ ಕಾರ್ಯದರ್ಶಿಗಳು : ಇಸ್ಮಾಯಿಲ್ ಮಾಸ್ತಿಕಟ್ಟೆ, ಹಸನ್ ಕೊಟ್ಟಿಗೆಹಾರ, ಫಾರೂಕ್ ಶಾಮಿಯಾನ ಸಕಲೇಶಪುರ
ಖಜಾಂಚಿ :  ಹಸೈನಾರ್ ಆನೆಮಹಲ್ -ಹಾಸನ
ಹಿರಿಯ ಸಲಹೆಗಾರರು : ನಿಯಾಝ್ ಅಹ್ಮದ್ ಚಿಕ್ಕಮಗಳೂರು, ಕೆಎಸ್ ಹಂಝ ಎಡೂರು, ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು
ಶಿಕ್ಷಣ ವಿಭಾಗದ ಸಂಚಾಲಕರು : ಕೆ. ಎಂ. ಅಕ್ಬರ್ ಚಿಕ್ಕಮಗಳೂರು, ಜಿನಾಸುದ್ದೀನ್  ಶುಂಠಿಕೊಪ್ಪ
ವೈದ್ಯಕೀಯ ಸಂಯೋಜಕ :  ಅಬ್ದುಲ್ ರಹ್ಮಾನ್ ಮಾಳೂರು, ಅಬ್ದುಲ್ ಹಕ್  ಶಾಂತಿಪುರ
ಕಾರ್ಯಕಾರಿ ಸದಸ್ಯರು: ಸಲೀಂ ಹಾಸನ, ಆಸೀಫ್ ರೋಷನ್ ಬೇಲೂರು, ಶರೀಫ್ ಸಕಲೇಶಪುರ, ಪರ್ವೇಝ್ ನೂರಿ ಅರಸೀಕೆರೆ, ಅಬ್ದುಲ್ ವಾಹಿದ್ ಅಹ್ಮದ್ ಮಾಗುಂಡಿ, ಅಬೂಬಕರ್ ಸಿದ್ದೀಕ್ ಚಿಕ್ಕಮಗಳೂರು, ಅಬೂಬಕರ್ ಹಾಜಿ ಜಯಪುರ, ಸುಲೈಮಾನ್ ಕೊಡ್ಲಿಪೇಟೆ, ಅಝೀಝ್ ಮಡಿಕೇರಿ, ಮೊಯಿನುಲ್ ಅತೀಖ್ ಕೊಡಗು, ಜಲೀಲ್ ಅಮ್ಮತ್ತಿ ಕೊಡಗು, ಆರ್.ಎ. ಮೊಹಿದ್ದೀನ್ ರಂಜದಕಟ್ಟೆ, ಯಾಸೀರ್ ಹೊಸನಗರ, ಮುಹಿಯದ್ದಿ ಗುಡ್ಡೆಕೊಪ್ಪ
ಸಲಹಾ ಮಂಡಳಿಯ ಸದಸ್ಯರು : ಕೆ. ಮಹಮ್ಮದ್ ಚಿಕ್ಕಮಗಳೂರು, ಮುಹಿಯದ್ದಿ ಗುಡ್ಡೆಕೊಪ್ಪ, ಬಿ.ಎ. ಜಮಾಲುದ್ದೀನ್ ಬೇಲೂರು, ಡಿ.ಎಫ್. ಅಶ್ರಫ್ ಅಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News