ಸಮಾನತೆಗಾಗಿ ಕಾಂಗ್ರೆಸ್, ಆರೆಸ್ಸೆಸ್ ಎರಡನ್ನೂ ಸೋಲಿಸಿ: ನಟ ಚೇತನ್

Update: 2021-09-09 06:32 GMT
ನಟ ಚೇತನ್

ಬೆಂಗಳೂರು: ಕಾಂಗ್ರೆಸ್ ಹಾಗೂ ಆರೆಸ್ಸೆಸ್ ವಿರುದ್ಧ ನಟ ಚೇತನ್ ಅಹಿಂಸಾ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ಜಾತಿ ನಾಯಕ ಎಂದು ಆರೋಪಿಸಿದ್ದ ಚೇತನ್ ಇದೀಗ ಸಮಾನತೆಗಾಗಿ ಕಾಂಗ್ರೆಸ್, ಆರೆಸ್ಸೆಸ್ ಎರಡನ್ನೂ ಸೋಲಿಸಿ ಎಂದು ಹೇಳಿದ್ದಾರೆ. 

ಈ ಕುರಿರು ಟ್ವೀಟ್ ಮಾಡಿರುವ ಅವರು 1925ರಲ್ಲಿ ಆರೆಸ್ಸೆಸ್ ಅನ್ನು ಸ್ಥಾಪಿಸಿರುವ ಕೆ.ಬಿ ಹಡ್ಗೆವಾರ್ ಅವರು ಕಾಂಗ್ರೆಸ್ ಸದಸ್ಯರಾಗಿದ್ದರು. ಕಾಂಗ್ರೆಸ್ ನ ಇನ್ನೋರ್ವ ಸದಸ್ಯ ಬಾಲ ಗಂಗಾಧರ್ ತಿಲಕ್ ರಿಂದ ಅವರು ಪ್ರಭಾವಿತರಾಗಿದ್ದರು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಸಂಘಪರಿವಾರ ಸದಾ ಒಂದಕ್ಕೊಂದು ಬೆಸೆದುಕೊಂಡೇ ಇದ್ದು, ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವುದರಿಂದ ಇವುಗಳಿಗೆ ಲಾಭವಾಗುತ್ತಿದೆ ಎಂದು ದೂರಿದ್ದಾರೆ.

'ಅಧಿಕಾರಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ ಎಂದ ಅವರು, ಬಿಜೆಪಿ ದ್ವೇಷದ ಸಿದ್ಧಾಂತ ಹೊಂದಿದ್ದು,  ನಾವು ಮೊದಲು ಬಿಜೆಪಿಯನ್ನು ಕಿತ್ತೊಗೆದರೆ, ಕಾಂಗ್ರೆಸ್ ರೂಪಾಂತರಗೊಂಡು ಇನ್ನಷ್ಟು ಶಕ್ತಿಯನ್ನು ಪಡೆಯುತ್ತದೆ' ಎಂದಿದ್ದಾರೆ. 

'ನಾವು ಮೊದಲು ಕಾಂಗ್ರೆಸ್ ಅನ್ನು ಕಿತ್ತುಹಾಕಿದರೆ, ಬಿಜೆಪಿಯ ಸಿದ್ಧಾಂತವನ್ನು ನಮ್ಮ ಅಸಮಾನತೆಯ ಸಿದ್ಧಾಂತದಿಂದ ಹತ್ತಿಕ್ಕಬಹುದು' ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News