ಪ್ರತಿಭಟನೆಗೆ ಅನುಮತಿ ಕಡ್ಡಾಯ : ತಾಲಿಬಾನ್ ಸರಕಾರದ ಆದೇಶ

Update: 2021-09-09 17:42 GMT

ಕಾಬೂಲ್, ಸೆ.9: ಪ್ರತಿಭಟನೆ ನಡೆಸಬೇಕಿದ್ದರೆ ಮೊದಲೇ ಸರಕಾರದ ಅನುಮತಿ ಪಡೆದಿರಬೇಕು. ಪ್ರತಿಭಟನೆಯಲ್ಲಿ ಮೊಳಗಿಸುವ ಘೋಷಣೆ, ಪ್ರದರ್ಶಿಸುವ ಬ್ಯಾನರ್‌ಗಳ ಬಗ್ಗೆಯೂ ಮಾಹಿತಿ ನೀಡಿ ಅನುಮತಿ ಪಡೆಯಬೇಕು ಎಂದು ಅಫ್ಘಾನಿಸ್ತಾನದ ನೂತನ ಸರಕಾರ ಆದೇಶ ಜಾರಿಗೊಳಿಸಿದೆ.

ಈಗಿನ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಪ್ರತಿಭಟನೆ ಆಯೋಜಿಸಲು ಪ್ರಯತ್ನಿಸಬಾರದು ಎಂದು ಎಲ್ಲಾ ಪ್ರಜೆಗಳಿಗೂ ಘೋಷಣೆ ಮೂಲಕ ಸೂಚಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

 ಒಳಾಡಳಿತ ಇಲಾಖೆ ಜಾರಿಗೊಳಿಸಿದ ನೂತನ ನಿಯಮದಡಿ ಮಹಿಳೆಯರರಿಗೆ ಪ್ರತಿಭಟಿಸುವ ಅವಕಾಶ ದೊರಕುವ ಸಾಧ್ಯತೆಯಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News