ಭಾರವಾಗುತ್ತಲೇ ಇರುವ ರೈತರ ಸಾಲದ ಹೊರೆ: ಎಸ್ಎಸ್ಎಸ್ ಸಮೀಕ್ಷೆ ಬಹಿರಂಗ

Update: 2021-09-15 17:02 GMT

ಹೊಸದಿಲ್ಲಿ, ಸೆ.16: ದೇಶದಲ್ಲಿ ರೈತ ಕುಟುಂಬವು ಪಾವತಿಸಲು ಬಾಕಿಯಿರಿಸಿರುವ ಸರಾಸರಿ ಸಾಲದ ಮೊತ್ತವು 2013ರಲ್ಲಿ 47 ಸಾವಿರ ರೂ.ಗಳಿದ್ದು, 2019ರ ವೇಳೆಗೆ 74 ಸಾವಿರ ರೂ.ಗೆ ಏರಿಕೆಯಾಗಿದೆಯೆಂಬ ಕಳವಳಕಾರಿ ಸಂಗತಿ ಇತ್ತೀಚೆಗೆ ಪ್ರಕಟವಾದ 77ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್ಎಸ್ಎಸ್)ನಿಂದ ಬೆಳಕಿ ಬಂದಿದೆ.

ರೈತರ ಪಾವತಿ ಬಾಕಿ ಸಾಲದ ಮೊತ್ತದಲ್ಲಿ ಗಣನೀಯ ಹೆಚ್ಚಳಕ್ಕೆ ಅವರ ಆದಾಯದಲ್ಲಿ ಕುಸಿತವಾಗಿರುವುದೇ ಕಾರಣವೆಂದು ‘ಗ್ರಾಮೀಣ ಭಾರತದ ಕೃಷಿಕ ಕುಟುಂಬಗಳ ಜಮೀನು ಹಾಗೂ ಜಾನುವಾರುಗಳ ಕುರಿತಾದ ಪರಿಸ್ಥಿತಿ ಅಂದಾಜು ಸಮೀಕ್ಷೆ-2019’ ಯಿಂದ ವ್ಯಕ್ತವಾಗಿದೆ.

ಭಾರತದಲ್ಲಿ ರೈತ ಕುಟುಂಬದ ಸರಾಸರಿ ಆದಾಯವು ಮಾಸಿಕವಾಗಿ 10 ಸಾವಿರ ರೂ. ಆಗಿದೆ. ಆದರೆ ಇದು ದೊಡ್ಡ ನಗರಗಳಲ್ಲಿ ಮನೆಗೆಲಸದಾಳುಗಳು ಪಡೆಯುವ ಆದಾಯಕ್ಕಿಂತ ತೀರಾ ಕಡಿಮೆಯಾಗಿದೆ ಎಂದು ಈ ವರದಿಯ ಬಗ್ಗೆ ಖ್ಯಾತ ಸುದ್ದಿಜಾಲತಾಣ ಪ್ರಕಟಿಸಿರುವ ವಿಶ್ಲೇಷಣಾ ವರದಿ ಹೇಳಿದೆ.

ದೇಶದಲ್ಲಿ ಸರಾಸರಿಯಾಗಿ ಒಂದು ರೈತ ಕುಟುಂಬಕ್ಕೆ ಕೃಷಿಯಿಂದ ದೊರೆಯುವ ಆದಾಯವು ಆ ಕುಟುಂಬದ ಒಟ್ಟು ಆದಾಯದ ಮೂರನೆ ಒಂದು ಭಾಗ ಮಾತ್ರವಷ್ಟೇ ಆಗಿದೆ. ವಿವಿಧ ಬಗೆಯ ಬೆಳೆಗಳನ್ನು ಬೆಳೆಯುವುದರಿಂದ ರೈತ ಕುಟುಂಬವು ಸರಾರಸರಿ 3798 ರೂ. ಆದಾಯ ಗಳಿಸಿದರೆ, ಪಶುಸಂಗೋಪನೆ ಮೂಲಕ 1582 ರೂ. ಸಂಪಾದಿಸಿದೆ. ವ್ಯಾಪಾರದ ಮೂಲಕ 641 ರೂ.. ಹಾಗೂ ಕೂಲಿ ಹಾಗೂ ವೇತನದ 4063 ರೂ. ಸಂಪಾದಿಸುತ್ತದೆ ಎಂದು ಸಮೀಕ್ಷೆಯಿಂದ ತಿಳಿದುಬರುತ್ತದೆ. ಹೀಗಾಗಿ ಒಂದು ರೈತ ಕುಟುಂಬವು ತನ್ನ ಹೊಲದಲ್ಲಿ ದುಡಿಯುವುದಕ್ಕಿಂತ ದೊರೆಯುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಬೇರೆಡೆ ದುಡಿದು ಸಂಪಾದಿಸಬಹುದಾಗಿದೆ ಎನ್ನುವುದು ದೃಢವಾಗುತ್ತದೆ. ಎಂದು ದಿ ಪ್ರಿಂಟ್ ವರದಿ ತಿಳಿಸಿದೆ.

 ರೈತರ ಆದಾಯದಲ್ಲಿ ಆರೋಗ್ಯಕರವಾದ ಬೆಳವಣಿಗೆಯಾಗಿದೆಯೆಂಬುದು ಕೂಡಾ ಸುಳ್ಳೆಂಬುದು ಈ ಸಮೀಕ್ಷೆಯಿಂದ ವ್ಯಕ್ತವಾಗುತ್ತದೆ.. ಹಾಲಿ ಹಾಗೂ ಪ್ರಸಕ್ತ ಸಮೀಕ್ಷೆ ನಡೆದ 2013 ಹಾಗೂ 2019ರ ಅವಧಿಗಳ ನಡುವೆ ರೈತರ ಸಾಧಾರಣ ಆದಾಯದಲ್ಲಿ ಶೇ.59ರಷ್ಟು ಹೆಚ್ಚಳವಾಗಿರುವಂತೆ ತೋರುತ್ತದೆಯಾದರೂ, ಈ ಅವಧಿಯಲ್ಲಿ ಆಗಿರುವ ಹಣದುಬ್ಬರವನ್ನು ಲೆಕ್ಕಹಾಕಿದರೆ ಅವರ ಆದಾಯದಲ್ಲಿ ಕೇವಲ ಶೇ.22ರಷ್ಟು ಏರಿಕೆ ಮಾತ್ರವಷ್ಟೇ ಆಗಿದೆ. ಕೇವಲ ಬೆಳೆ ಉತ್ಪಾದನೆಯ ಬಗೆಗಷ್ಟೇ ನಾವು ಗಮನಹರಿಸಿದಲ್ಲಿ ಕಳೆದ ಆರು ವರ್ಷಗಳಲ್ಲಿ ರೈತರ ಆದಾಯವು ತಳಮಟ್ಟಕ್ಕೆ ಕುಸಿದಿದೆ. 2013ರಲ್ಲಿ ಓರ್ವ ರೈತನು ಕೃಷಿಯ ಮೂಲಕ 3081 ರೂ, ಸಂಪಾದಿಸಿದ್ದು, ಅದು 2012ರಲ್ಲಿದ್ದ ಮಾಸಿಕ 2770 ರೂ.ಗಳ ಆದಾಯಕ್ಕೆ ಸರಿಸಮಾನವಾಗಿದೆ ಎಂದು ದಿ ಪ್ರಿಂಟ್ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News