ಬಳ್ಳಾರಿ: 36 ಬಾಲ ಕಾರ್ಮಿಕರ ರಕ್ಷಣೆ

Update: 2021-09-21 17:34 GMT

ಬಳ್ಳಾರಿ, ಸೆ.21: ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ವಾಹನಗಳ ಮೇಲೆ ಆಕಸ್ಮಿಕ ದಾಳಿ ಮಾಡಿ 25 ಬಾಲಕಿಯರು ಮತ್ತು 11 ಬಾಲಕರು ಸೇರಿದಂತೆ ಒಟ್ಟು 36 ಬಾಲಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿದ ಮಕ್ಕಳನ್ನು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.

ಸಿರುಗುಪ್ಪ ತಾಲೂಕು ಸಿರಿಗೇರಿ, ಕೊಂಚಿಗೇರಿ, ದಾಸಪುರ, ಶಾನವಾಸಪುರ, ದೇಶನೂರು ಮತ್ತು ಭೈರಾಪುರ ಗ್ರಾಮದ ಹೊಲಗಳಿಗೆ ಕರೆದುಕೊಂಡು ಹೋಗುವ 3 ಟಂಟಂ ಗಾಡಿಗಳಲ್ಲಿ 36 ಮಕ್ಕಳು ಹೊಲಗಳಲ್ಲಿ ಕಳೆ ಕೀಳುವ ಮೆಣಸಿನಕಾಯಿ ಬಿಡಿಸುವುದು, ಈರುಳ್ಳಿ ಕೀಳುವುದು ಹಾಗೂ ಇನ್ನಿತರ ಕೆಲಸಗಳಿಗೆ ಹೊಲಗಳಿಗೆ ಕರೆದುಕೊಂಡು ಹೋಗುತ್ತಿದ್ದ ವಾಹನ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗೆ ತಿಳಿಸಲಾಯಿತು. 

ಜಮೀನು ಮಾಲಕರಿಗೆ ವಾಹನ ಚಾಲಕರಿಗೆ ಮತ್ತು ಕಾರ್ಮಿಕರಿಗೆ ಬಾಲಕಾರ್ಮಿಕ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕಾಗಿದೆ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News