ವಿಶ್ವಸಂಸ್ಥೆಗೆ ರಾಯಭಾರಿ ನೇಮಿಸಿದ ತಾಲಿಬಾನ್

Update: 2021-09-22 05:04 GMT

ಕಾಬೂಲ್ : ಆಂತರಿಕ ಸಂಘರ್ಷ ಮುಂದುವರಿದಿರುವ ಅಪ್ಘಾನಿಸ್ತಾನದ ತಾಲಿಬಾನ್ ಸರ್ಕಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದಲ್ಲಿ ಪ್ರಾತಿನಿಧ್ಯಕ್ಕೆ ಆಗ್ರಹ ಮಂಡಿಸಿದೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಪ್ಘಾನಿಸ್ತಾನ ಪ್ರತಿನಿಧಿಯ ಕ್ರಮಬದ್ಧತೆಯನ್ನು ಪ್ರಶ್ನಿಸಿದೆ. ತಾಲಿಬಾನ್ ಇದೀಗ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿಯಾಗಿ ಮುಹಮ್ಮದ್ ಸುಹೈಲ್ ಶಹೀನ್ ಅವರನ್ನು ನೇಮಕ ಮಾಡಿದೆ.

ಇವರು ಕತರ್‌ ನಲ್ಲಿ ದಂಗೆಕೋರರ ಜತೆಗೆ ನಡೆದ ಶಾಂತಿ ಸಂಧಾನ ಮಾತುಕತೆ ವೇಳೆ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದರು. ನೂತನ ಪ್ರತಿನಿಧಿ ಮುಂದಿನ ವಾರ ನಡೆಯುವ ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧಿವೇಶನದಲ್ಲಿ ಭಾಷಣ ಮಾಡುವಂತೆ ತಾಲಿಬಾನ್ ಸೂಚನೆ ನೀಡಿದೆ.

ಇದು ಅಫ್ಘಾನಿಸ್ತಾನದ ಮಾಜಿ ರಾಯಭಾರಿ ಹಾಗೂ ತಾಲಿಬಾನ್ ಆಡಳಿತಗಾರರ ನಡುವೆ ಉನ್ನತ ಮಟ್ಟದ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ರಾಜತಾಂತ್ರಿಕ ಕದನಕ್ಕೆ ಕಾರಣವಾಗುವ ನಿರೀಕ್ಷೆ ಇದೆ.

ಹೊಸ ತಾಲಿಬಾನ್ ಆಡಳಿತಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ವಿಶ್ವದ ಪ್ರತಿಯೊಂದು ದೇಶಗಳು ಅಫ್ಘಾನಿಸ್ತಾನದ ಪ್ರತಿ ಬೆಳವಣಿಗೆಗಳನ್ನೂ ಎಚ್ಚರಿಕೆಯಿಂದ ವೀಕ್ಷಿಸುತ್ತಿವೆ. ಜಾಗತಿಕ ಸಮುದಾಯ ಮಾನ್ಯತೆ ನೀಡುವ ನಿಟ್ಟಿನಲ್ಲಿ ಯಾವುದೇ ತರಾತುರಿಯಲ್ಲಿ ಇಲ್ಲವಾದರೂ, ವಿಶ್ವಸಂಸ್ಥೆಯ ಪ್ರತಿನಿಧಿ ವಿಚಾರ ಪ್ರಮುಖ ಎನಿಸಲಿದೆ. ಜಾಗತಿಕ ವೇದಿಕೆಯಲ್ಲಿ ತಾಲಿಬಾನ್ ಪ್ರತಿನಿಧಿಗೆ ಅವಕಾಶ ನೀಡಬೇಕೇ ಎಂಬ ವಿಚಾರ ಪ್ರಮುಖವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News