ಮರಾಠಿ ನಟಿ ಈಶ್ವರಿ ದೇಶಪಾಂಡೆ, ಆಕೆಯ ಸ್ನೇಹಿತ ಕಾರು ಅಪಘಾತದಲ್ಲಿ ಮೃತ್ಯು

Update: 2021-09-22 06:37 GMT
ಈಶ್ವರಿ ದೇಶಪಾಂಡೆ (Photo: indiatoday.in)

ಮುಂಬೈ: ಮರಾಠಿ ಹಾಗೂ ಹಿಂದಿ ಸಿನೆಮಾದಲ್ಲಿ ಕೆಲಸ ಮಾಡಿರುವ ಈಶ್ವರಿ ದೇಶಪಾಂಡೆ, ಸೆಪ್ಟೆಂಬರ್ 21 ರ ಸೋಮವಾರ ಗೋವಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

25 ರ ಹರೆಯದ ನಟಿ ತನ್ನ ಸ್ನೇಹಿತ ಶುಭಂ ದಡ್ಗೆ ಜೊತೆ ಪ್ರಯಾಣಿಸುತ್ತಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಬರ್ದೇಝ್ ತಾಲೂಕಿನ ಅರ್ಪೋರಾ ಅಥವಾ ಹಡ್ಫಡೆ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಈಶ್ವರಿಯ ಕಾರು ಬೆಳಿಗ್ಗೆ 5: 30 ರ ಸುಮಾರಿಗೆ ಬಾಗಾ ಕ್ರೀಕ್‌ಗೆ ನುಗ್ಗಿತು. ಈಶ್ವರಿ ಹಾಗೂ  ಆಕೆಯ ಸ್ನೇಹಿತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News