ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌: ಎರಡು ಸ್ಪರ್ಧೆಗಳಲ್ಲಿ ಬೆಳ್ಳಿ ಗೆದ್ದ ಭಾರತ

Update: 2021-09-25 05:59 GMT
photo:  Screengrab/ World Archery

ಹೊಸದಿಲ್ಲಿ: ಅಮೆರಿಕದ ಯಾಂಕ್ಟನ್‌ನಲ್ಲಿ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಎರಡೂ ಸ್ಪರ್ಧೆಗಳಲ್ಲಿ ಕೊಲಂಬಿಯಾ ವಿರುದ್ಧ ಸೋತಿರುವ  ಭಾರತೀಯ ಮಹಿಳಾ ಹಾಗೂ  ಮಿಶ್ರ ಜೋಡಿ ಕಾಂಪೌಂಡ್ ಆರ್ಚರಿ ತಂಡಗಳು ಬೆಳ್ಳಿ ಪದಕಗಳನ್ನು ಗೆದ್ದವು.

ಭಾರತೀಯ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಹಾಗೂ  ಜ್ಯೋತಿ ಸುರೇಖಾ ವೆನ್ನಮ್ ಒಂದು ಪಾಯಿಂಟ್ ಮುನ್ನಡೆಯೊಂದಿಗೆ ಆರಂಭಿಸಿದರು (39-38).  ಆದರೆ ನಂತರ ವೇಗ ಕಳೆದುಕೊಂಡರು. ಭಾರತೀಯರು ನಾಲ್ಕು ಪಾಯಿಂಟ್‌ಗಳ ಅಂತರದಿಂದ (150-154)ಶರಣಾದರು.

ಮತ್ತೊಂದೆಡೆ, ಜ್ಯೋತಿ, ಮುಸ್ಕಾನ್ ಕಿರಾರ್ ಹಾಗೂ  ಪ್ರಿಯಾ ಗುರ್ಜರ್ ಅವರನ್ನೊಳಗೊಂಡ ಏಳನೇ ಶ್ರೇಯಾಂಕದ ಮಹಿಳಾ ತಂಡ, ಸಾರಾ ಲೋಪೆಝ್, ಅಲೆಜಾಂಡ್ರಾ ಉಸ್ಕಿಯಾನೊ ಹಾಗೂ  ನೋರಾ ವಾಲ್ಡೆಝ್ ಅವರ ವಿರುದ್ಧ ಐದು ಅಂಕಗಳ ಅಂತರದಿಂದ (224-229) ಸೋತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News