ಮೈಸೂರು ಅರಮನೆ ಪ್ರವೇಶ ಶುಲ್ಕ ಏರಿಕೆ

Update: 2021-09-25 09:01 GMT

ಮೈಸೂರು, ಸೆ.25: ಮೈಸೂರು ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಿಸಲು ಅರಮನೆ ಮಂಡಳಿ ನಿರ್ಧರಿಸಿದೆ.

ಈ ಹಿಂದೆ ವಯಸ್ಕರಿಗೆ 70 ರೂ. ಇದ್ದ ಪ್ರವೇಶ ಶುಲ್ಕವನ್ನು 100 ರೂ.ಗೆ ಏರಿಸಲಾಗಿದೆ. ವಾರಾಂತ್ಯ, ಸರಕಾರಿ ರಜೆ ದಿನಗಳಲ್ಲೂ ಪ್ರವೇಶ ಶುಲ್ಕ 100 ರೂಪಾಯಿಯೇ ಆಗಿರಲಿದೆ. ವಿದೇಶಿಗರಿಗೂ ಇಷ್ಟೇ ಶುಲ್ಕ ನಿಗದಿಪಡಿಸಲಾಗಿದೆ. ಈ ಹಿಂದೆ ವಾರಾಂತ್ಯ ಮತ್ತು ಸರಕಾರಿ ರಜೆ ದಿನಗಳಲ್ಲಿ ಅರಮನೆ ಪ್ರವೇಶ ಶುಲ್ಕ 90 ರೂ. ಆಗಿತ್ತು.

ಅದೇರೀತಿ 18 ವರ್ಷದೊಳಗಿನ ಮಕ್ಕಳ ಪ್ರವೇಶ ಶುಲ್ಕವನ್ನೂ 30 ರೂ.ನಿಂದ 50 ರೂ.ಗೆ ಏರಿಸಲು ಅರಮನೆ ಮಂಡಳಿ ನಿರ್ಧರಿಸಿದೆ. ವಿದ್ಯಾರ್ಥಿಗಳಿಗೆ ಅರಮನೆ ಪ್ರವೇಶ ಶುಲ್ಕವನ್ನು 10 ರೂ.ನಿಂದ 30 ರೂ.ಗೆ ಹೆಚ್ಚಳ ಮಾಡಲಾಗಿದೆ.

ಪ್ರವೇಶ ಶುಲ್ಕ ಪರಿಷ್ಕರಿಸದೆ 4 ವರ್ಷಗಳಾಗಿತ್ತು. ಕೋವಿಡ್‌ಗೆ ಮುನ್ನ ವಾರ್ಷಿಕ  17 ಕೋಟಿ ರೂ. ಆದಾಯ ಬರುತಿತ್ತು. ಆದರೆ ಎರಡು ವರ್ಷಗಳಿಂದ ಆದಾಯಕ್ಕೆ ಪೆಟ್ಟು ಬಿದ್ದಿದೆ. ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಿಲ್ಲ. ಈ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ ಏರಿಕೆ ಅನಿವಾರ್ಯ ಎಂದು ಅರಮನೆ ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News