ಲೋಕಸಭೆ ಸ್ಪೀಕರ್ ಭಾಷಣ ಹೊಸ ಪರಂಪರೆಯೇನಲ್ಲ: ಸ್ಪೀಕರ್ ಕಾಗೇರಿ

Update: 2021-09-25 13:43 GMT
ಸ್ಪೀಕರ್ ಕಾಗೇರಿ 

ಬೆಂಗಳೂರು, ಸೆ. 25: `ವಿಧಾನಸಭೆ ಸಭಾಂಗಣದಲ್ಲಿ ಲೋಕಸಭೆ ಸ್ಪೀಕರ್ ಭಾಷಣ ಕಾರ್ಯಕ್ರಮ ಹೊಸ ಪರಂಪರೆಯೇನಲ್ಲ. ಕಾಂಗ್ರೆಸ್‍ಗೆ ಮಾಹಿತಿ ಕೊರತೆ ಇದ್ದಂತಿದೆ' ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದ್ದಾರೆ.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಅವರು ವಿಧಾನಸಭೆಗಳಲ್ಲಿ ಹಲವು ಬಾರಿ ಮಾತನಾಡಿದ್ದಾರೆ. ನಾನು ಇದೇ ಮೊದಲಿಗೆ ಏನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸಭೆ ಮತ್ತು ವಿಧಾನ ಪರಿಷತ್ ಸ್ಪೀಕರ್ ಹಾಗೂ ಸಭಾಪತಿ ಅಧಿಕಾರ ವ್ಯಾಪ್ತಿಯಾಗಿದೆ. ಇಲ್ಲಿ ಬೇರೆಯವರ ಹಸ್ತಕ್ಷೇಪದ ಅಗತ್ಯವಿಲ್ಲ. ಸಂವಿಧಾನದ ಉಲ್ಲಂಘನೆ ಆಗಿದೆ ಎನ್ನುವವರು ಇನ್ನಷ್ಟು ಅರಿತುಕೊಳ್ಳಬೇಕಿದೆ. 2002ರ ಜೂನ್‍ನಲ್ಲಿ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಅಂದಿನ ಸ್ಪೀಕರ್ ಮನೋಹರ್ ಜೋಶಿ ಮಾತನಾಡಿದ್ದಾರೆ. ಆ ವೇಳೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರು ಎಂದು ವಿವರಿಸಿದರು.

ವಿಧಾನಸಭೆಯ ಸಭಾಂಗಣದಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಅವರು ಮಾತನಾಡಿರುವುದು ದಾಖಲೆ ಇದೆ. ಹಿಂದಿನ ಸ್ಪೀಕರ್ ಸುಮಿತ್ರ ಮಹಾಜನ್ ಅವರು ಗುಜರಾತ್ ವಿಧಾನಸಭೆಯಲ್ಲಿ ಭಾಷಣ ಮಾಡಿದ್ದಾರೆ. ಲೋಕಸಭೆ ಸ್ಪೀಕರ್ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News