ನಿಷ್ಕ್ರಿಯ ರಾಜಕೀಯ ಪಕ್ಷಗಳಿಗೆ ನೋಂದಣಿ ರದ್ದತಿ ಭೀತಿ

Update: 2021-09-25 16:40 GMT

ಹೊಸದಿಲ್ಲಿ,ಸೆ.25: ಚುನಾವಣಾ ಆಯೋಗವು 2,796 ನೋಂದಾಯಿತ ಆದರೆ ಮಾನ್ಯತೆಯನ್ನು ಪಡೆಯದಿರುವ ಪಕ್ಷಗಳು ಸೇರಿದಂತೆ ರಾಜಕೀಯ ಪಕ್ಷಗಳ ಪರಿಷ್ಕೃತ ನೋಂದಣಿ ಪಟ್ಟಿಯನ್ನು ಸೆ.23ರಂದು ಅಧಿಸೂಚಿಸಿದ್ದು,ಇದೇ ವೇಳೆ ನಿಷ್ಕ್ರಿಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಲು ಕಾನೂನು ಸಚಿವಾಲಯದ ಅನುಮತಿಯನ್ನು ಕೋರಿದೆ.

ಚುನಾವಣೆಗಳಲ್ಲಿ ಸ್ಪರ್ಧಿಸದ ಪಕ್ಷಗಳಿಂದ ಆದಾಯ ತೆರಿಗೆ ವಿನಾಯಿತಿಯ ಸಂಭಾವ್ಯ ದುರ್ಬಳಕೆಯ ಬಗ್ಗೆ ಚುನಾವಣಾ ಆಯೋಗವು ಕಳವಳವನ್ನು ವ್ಯಕ್ತಪಡಿಸಿದೆ. ಆಯೋಗವು ಈ ವಿಷಯವನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಗಮನಕ್ಕೂ ತಂದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಾನ್ಯತೆ ಹೊಂದಿರುವ ಮತ್ತು ಹೊಂದಿರದ ಪಕ್ಷಗಳು ಸೇರಿದಂತೆ ಕೇವಲ 673 ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. 2019 ಮಾರ್ಚ್‌ನಲ್ಲಿ ನೋಂದಾಯಿತ,ಆದರೆ ಮಾನ್ಯತೆ ಹೊಂದಿರದ ಪಟ್ಟಿಯಲ್ಲಿ 2,293 ಪಕ್ಷಗಳಿದ್ದವು ಎಂದು ಆಯೋಗದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News