ಚಹಾ ಅಂಗಡಿಯಲ್ಲಿ ತನ್ನ ತಂದೆಗೆ ಸಹಾಯ ಮಾಡಿದ್ದ ಚಿಕ್ಕ ಹುಡುಗ ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಿದ್ದಾನೆ:ಪ್ರಧಾನಿ ಮೋದಿ

Update: 2021-09-25 17:44 GMT

ವಾಷಿಂಗ್ಟನ್: ಭಾರತೀಯ ಪ್ರಜಾಪ್ರಭುತ್ವದ ಬಲವನ್ನು ಎತ್ತಿ ತೋರಿಸಿದ ಪ್ರಧಾನಿ ನರೇಂದ್ರ ಮೋದಿ, ಒಂದು ಕಾಲದಲ್ಲಿ ತನ್ನ ತಂದೆಗೆ ಚಹಾ ಅಂಗಡಿಯಲ್ಲಿ ಸಹಾಯ ಮಾಡುತ್ತಿದ್ದ ಚಿಕ್ಕ ಹುಡುಗ ಇಂದು ನಾಲ್ಕನೇ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು (ಯುಎನ್ ಜಿಎ) ಉದ್ದೇಶಿಸಿ ಮಾತನಾಡುತ್ತಿದ್ದಾನೆ ಎಂದು ತನ್ನ ಸಾಧನೆಯನ್ನು ಉಲ್ಲೇಖಿಸಿದರು.

ತಾನು 'ಪ್ರಜಾಪ್ರಭುತ್ವದ ತಾಯಿ' ಎಂದು ಕರೆಯಲ್ಪಡುವ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ. ನಾವು ಸಾವಿರಾರು ವರ್ಷಗಳ ಹಿಂದಿನ ಪ್ರಜಾಪ್ರಭುತ್ವದ ಶ್ರೇಷ್ಠ ಸಂಪ್ರದಾಯವನ್ನು ಹೊಂದಿದ್ದೇವೆ. ಒಂದು ಕಾಲದಲ್ಲಿ ತನ್ನ ಚಹಾ ಅಂಗಡಿಯಲ್ಲಿ ತನ್ನ ತಂದೆಗೆ ಸಹಾಯ ಮಾಡುತ್ತಿದ್ದ ಚಿಕ್ಕ ಹುಡುಗ ಇಂದು ನಾಲ್ಕನೇ ಬಾರಿಗೆ ಯುಎನ್ ಜಿಎಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಪ್ರಜಾಪ್ರಭುತ್ವದ ಬಲವನ್ನು ತೋರಿಸುತ್ತದೆ" ಎಂದು ಯುಎನ್ ಜಿಎ 76 ನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News