ನಾಳೆ ಮಮತಾ ಬ್ಯಾನರ್ಜಿಗೆ ಪ್ರಮಾಣವಚನ ಬೋಧಿಸಲು ಒಪ್ಪಿಕೊಂಡ ರಾಜ್ಯಪಾಲ ಜಗದೀಪ್ ಧಂಕರ್

Update: 2021-10-06 10:39 GMT

ಕೋಲ್ಕತಾ: ರಾಜ್ಯ ಸರಕಾರದ ಕೋರಿಕೆಯ ಬಳಿಕ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರಿಗೆ ನಾಳೆ ಪ್ರಮಾಣವಚನ ಬೋಧಿಸಲು  ರಾಜ್ಯಪಾಲ ಜಗದೀಪ್ ಧಂಕರ್ ಒಪ್ಪಿಕೊಂಡಿದ್ದಾರೆ.

ಪಶ್ಚಿಮಬಂಗಾಳ ರಾಜ್ಯಪಾಲರಾದ ಜಗದೀಪ್ ಧಂಕರ್ ಅವರು ಮಮತಾ ಬ್ಯಾನರ್ಜಿ, ಜಾಕಿರ್ ಹುಸೇನ್ ಹಾಗೂ ಅಮಿರುಲ್ ಇಸ್ಲಾಮ್ ಅವರಿಗೆ ಅಕ್ಟೋಬರ್ 7ರಂದು ಮಧ್ಯಾಹ್ನ 2 ಗಂಟೆಗೆ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಗವರ್ನರ್ ಕಚೇರಿ ಟ್ವೀಟ್ ಮಾಡಿತ್ತು.

ತಮ್ಮ ಹಿಂದಿನ ನಿರ್ಧಾರವನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ  ಅಸೆಂಬ್ಲಿ ಸ್ಪೀಕರ್ ಬಿಮನ್ ಬ್ಯಾನರ್ಜಿ ವಿನಂತಿಸಿದ ನಂತರ  ಜಗದೀಪ್ ಧಂಕರ್ ತಮ್ಮ ನಿಲುವು ಬದಲಿಸಿದ್ದಾರೆ. ಶಾಸಕರಿಗೆ ಪ್ರಮಾಣವಚನ ಬೋಧಿಸುವ ಅಧಿಕಾರವನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರಿಂದ ರಾಜ್ಯಪಾಲ ಧಂಕರ್ ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ರಾಜ್ಯಪಾಲರನ್ನು ಪ್ರಮಾಣವಚನ ಬೋಧಿಸಲು ವಿನಂತಿಸಿತ್ತು.

ಆದರೆ ರಾಜ್ಯಪಾಲರು, ಕಲಂ 188 ಅನ್ನು ಉಲ್ಲೇಖಿಸಿ, ಹೊಸದಾಗಿ ಚುನಾಯಿತರಾದ ಸದಸ್ಯರುಗಳಾದ-ಮಮತಾ ಬ್ಯಾನರ್ಜಿ,  ಜಾಕಿರ್ ಹುಸೇನ್ ಹಾಗೂ ಅಮಿರುಲ್ ಇಸ್ಲಾಂ ಅವರಿಗೆ ಪ್ರಮಾಣವಚನ ನೀಡುವುದಾಗಿ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ಕಲಂ 188 ರ ಪ್ರಕಾರ, ರಾಜ್ಯಪಾಲರು ಅಥವಾ ಅವರಿಂದ ನೇಮಕಗೊಂಡ ವ್ಯಕ್ತಿಯ ಮುಂದೆ ಪ್ರಮಾಣವಚನ ಅಥವಾ ದೃಢೀಕರಣವನ್ನು ಮಾಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News