ಗಡಿ‌ಜಿಲ್ಲೆ ಚಾಮರಾಜನಗರ ದಸರಾಗೆ ವಿದ್ಯುಕ್ತ ಚಾಲನೆ

Update: 2021-10-07 08:11 GMT

ಚಾಮರಾಜನಗರ: ಶಾಸಕ ಸಿ. ಪುಟ್ಟರಂಗಶೆಟ್ಟಿ  ಜ್ಯೋತಿ ಬೆಳಗಿಸುವುದರ ಮೂಲಕ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ಸಾಂಸ್ಕೃತಿಕ ಕಲಾ ತಂಡಗಳಿಗೆ ಚಾಲನೆ ನೀಡಿದರು.

ಚಾಮರಾಜನಗರದ ಚಾಮರಾಜೇಶ್ವರ ದೇವಾಲಯಕ್ಕೆ ಆಗಮಿಸಿದ ಶಾಸಕರು ಚಾಮರಾಜೇಶ್ವರಸ್ವಾಮಿಗೆ ನಮಿಸಿ ಪೂಜೆ ಸಲ್ಲಿಸಿದರು.

ಬಳಿಕ ವಿವಿಧ ಕಲಾತಂಡಗಳಿಗೆ ಹಾಗೂ ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು. ಈ ವೇಳೆ ವಾಧ್ಯದೊಂದಿಗೆ  ನಂದಿಧ್ವಜ, ವೀರಗಾಸೆ , ಡೊಳ್ಳುಕುಣಿತ, ಬೊಂಬೆಯಾಟ , ಸೇರಿದಂತೆ ವಿವಿಧ ಕಲಾತಂಡಗಳು ಮೆರಗು ನೀಡಿದವು.‌ ಇದೇ ಸಂಧರ್ಭದಲ್ಲಿ ಮೈಸೂರು ಅರಸ ಜಯಚಾಮರಾಜ ಒಡೆಯರ್ ಹುಟ್ಟಿದ  ಜನನ ಮಂಟಪಕ್ಕೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್ ನಗರಸಭೆ ಅಧ್ಯಕ್ಷೆ ಆಶಾ ಚೂಡಾ ಅಧ್ಯಕ್ಷ ಶಾಂತಮೂರ್ತಿ ಹಲವಾರು ಭಾಗಿಯಾಗಿದ್ರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News