'ತೈಲ ಬೆಲೆ ಮೋದಿಯವರ ಬುಲೆಟ್ ಟ್ರೈನ್‌ನಂತೆಯೇ ಮುನ್ನುಗ್ಗುತ್ತಿದೆ': ಕಾಂಗ್ರೆಸ್ ಟೀಕೆ

Update: 2021-10-07 09:28 GMT

ಬೆಂಗಳೂರು: ಇಂಧನ ಬೆಲೆಯೇರಿಕೆ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮೋದಿಯವರ ಅಚ್ಛೇದಿನ್ ಅಂದರೆ ಇದೇನಾ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯುಪಿಎ ಸರ್ಕಾರ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನೂ ಬಿಜೆಪಿ ತೆಗೆದು ಹಾಕಿದೆ ಎಂದು ಆರೋಪಿಸಿದೆ. 

ಕಾಂಗ್ರೆಸ್ ಟ್ವೀಟ್ ಹೀಗಿದೆ

''ಇಂಧನತೈಲಗಳ ಬೆಲೆಗಳು ಮೋದಿಯವರ ಬುಲೆಟ್ ಟ್ರೈನ್‌ನಂತೆಯೇ ಮುನ್ನುಗ್ಗುತ್ತಿದೆ! ಡೀಸೆಲ್ ಬೆಲೆ ಐತಿಹಾಸಿಕವಾಗಿ ಸೆಂಚುರಿ ಭಾರಿಸಿದೆ, ಪೆಟ್ರೋಲ್ ಬೆಲೆ ಡಬಲ್ ಸೆಂಚುರಿಯತ್ತ ಸಾಗಿದೆ. ಅಡುಗೆ ಸಿಲಿಂಡರ್ ಹೊತ್ತಿ ಉರಿಯುತ್ತಿದೆ! ಮೋದಿಯವರ ಅಚ್ಛೆ ದಿನ್ ಅಂದರೆ ಇದೇನಾ?''
ಎಂದು ರಾಜ್ಯ ಬಿಜೆಪಿ ಸರಕಾರವನ್ನು ಪ್ರಶ್ನಿಸಿದೆ. 

''ಯುಪಿಎ ಸರ್ಕಾರದ ಅಡುಗೆ ಅನಿಲ ಸಂಪರ್ಕದ ಯೋಜನೆಯ ಹೆಸರು ಬದಲಿಸಿ 'ಉಜ್ವಲ' ಮಾಡಿದರು. ಯುಪಿಎ ಸರ್ಕಾರ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನೂ ತೆಗೆದರು. ಮೊದಲು ಸಬ್ಸಿಡಿ ಬಿಟ್ಟುಕೊಡಿ ಎಂದವರು ಈಗ ಬೆಲೆ ಏರಿಸಿ ಜೀವವನ್ನೂ ಬಿಟ್ಟು ಬಿಡಿ ಎನ್ನುತ್ತಿದೆ ಬಿಜೆಪಿ. ಗ್ಯಾಸ್ ಸಬ್ಸಿಡಿ ತೆಗೆದಿದ್ದೇಕೆ?'' ಎಂದು ಆಕ್ರೋಶ ವ್ಯಕ್ತಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News