'ಸಿದ್ದರಾಮಯ್ಯರಿಂದ ಅರ್ಜಿ ತೆಗೆದುಕೊಂಡು ಅಭ್ಯರ್ಥಿ ಫೈನಲ್ ಮಾಡಬೇಕಾ?': ಹೆಚ್ ಡಿಕೆ ತಿರುಗೇಟು

Update: 2021-10-07 11:14 GMT

ಕಲಬುರಗಿ: ನಮ್ಮ ಪಕ್ಷದಲ್ಲಿ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು ಅನ್ನೋದು ನನಗೆ ಗೊತ್ತು. ಅದನ್ನು ಹೇಳೋಕೆ ಸಿದ್ದರಾಮಯ್ಯ ಯಾವ ದೊಣ್ಣೆ ನಾಯಕ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 

ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವರಿಂದ ಅರ್ಜಿ ತೆಗೆದುಕೊಂಡು ನಾನು ಅಭ್ಯರ್ಥಿ ಫೈನಲ್ ಮಾಡಬೇಕಾ? ಸಿದ್ದರಾಮಯ್ಯ ನನ್ನ ಪಕ್ಷದ ಮುಖಂಡರಾ ನಮ್ಮ ಪಕ್ಷದ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡೋಕೆ. ಸಿದ್ದರಾಮಯ್ಯ ಮುಸ್ಲಿಂ ಬಾಂಧವರನ್ನು ನಮ್ಮಿಂದ ದೂರ ಮಾಡಬೇಕು ಅಂತ ಅಂದುಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಜೆಡಿಎಸ್, ಬಿಜೆಪಿಯ ಬಿ ಟೀಂ ಅಂತ ಹೇಳಿಯೇ ಬಿಜೆಪಿಗೆ 105 ಸೀಟು ಬಂದಿರೋದು. ನಾನ್ಯಾಕೆ ಬಿಜೆಪಿಯನ್ನು ಗೆಲ್ಲಿಸೋದಕ್ಕೆ ಹೋಗಲಿ. ನನ್ನ ಪಕ್ಷ ಇಲ್ವಾ? ಮುಸ್ಲಿಂ ಬಂಧುಗಳಿಗೆ ಕಾಂಗ್ರೆಸ್ ಕೊಡುಗೆ ಏನು. ಮಾಜಿ ಪ್ರಧಾನಿ ದೇವೇಗೌಡರು ಮುಸ್ಲಿಂ ಕಮ್ಯೂನಿಟಿಗೆ ರಿಸರ್ವೇಶನ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಪದೇ ಪದೆ ಈ ರೀತಿಯಾಗಿ ಹೇಳಿದ್ರೆ ಮುಂದೆ ಮುಸ್ಲಿಂ ಸಮಾಜ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುತ್ತೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಅಷ್ಟಕ್ಕೂ ನಾನು ಪದವೀಧರರನ್ನು ಅಖಾಡಕ್ಕೆ ಇಳಿಸಿದ್ದೇನೆ. ಹೆಬ್ಬೆಟ್ಟು ಕ್ಯಾಂಡಿಡೇಟ್ ಹಾಕಿಲ್ಲ. ನಮ್ಮ ಬಗ್ಗೆ ಚರ್ಚೆ ಮಾಡಲು ನಿಮಗೆ ಯಾವ ಅರ್ಹತೆ ಇದೆ. ನಮ್ಮ ಬಗ್ಗೆ ಚರ್ಚೆ ಮಾಡೋದನ್ನು ಬಿಟ್ಟು, ಬಿಜೆಪಿ ಓಟಕ್ಕೆ ಬ್ರೇಕ್ ಹಾಕೋ ಕೆಲಸ ಮಾಡಲಿ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಬಿಎಸವೈ ಆಪ್ತನ ಮನೆ ಮೇಲೆ ಐಟಿ ದಾಳಿ ಪ್ರಕರಣ ಬಗ್ಗೆ ಮಾತನಾಡಿದ ಅವರು, ಐಟಿ ದಾಳಿ ಬಿಜೆಪಿ ಆಂತರಿಕ ಜಗಳವನ್ನು ಎತ್ತಿ ತೋರಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News