''ಬಿಎಸ್ ವೈ ಬಗ್ಗೆ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ'': ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

Update: 2021-10-11 07:23 GMT

ಬೆಂಗಳೂರು:  'ಪಕ್ಷ ಕಟ್ಟಿದವರನ್ನ ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್' ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿಯ ಟ್ವೀಟ್ ಹೀಗಿದೆ

‘’ಯಡಿಯೂರಪ್ಪ ಅವರ ಬಗ್ಗೆ  ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸಬೇಕಾದ ಅಗತ್ಯವಿಲ್ಲ. ರಾಜ್ಯ ಬಿಜೆಪಿಯ ಸರ್ವೋಚ್ಚ ನಾಯಕರಾಗಿ ಪಕ್ಷದಲ್ಲಿ ತಮ್ಮದೆ ಆದ ಸ್ಥಾನಮಾನ ಹೊಂದಿದ್ದಾರೆ. ನಕಲಿ ಗಾಂಧಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿರುವ #G23 (ಬಂಡಾಯ ನಾಯಕರು) ನಾಯಕರ ಯೋಗಕ್ಷೇಮದ ಬಗ್ಗೆ ನೀವು ಮೊದಲು ಲಕ್ಷ್ಯ ವಹಿಸಿ’’ ಎಂದು ಬಿಜೆಪಿ ಕಾಂಗ್ರೆಸ್ ಗೆ ತಿರುಗೇಟು ನೀಡಿದೆ.

‘’ಕಾಂಗ್ರೆಸ್‌ ಪಕ್ಷ ಒಬ್ಬೊಬ್ಬ ಹಿರಿಯ ನಾಯಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ. ಹಿರಿಯ ನಾಯಕ ಕಪಿಲ್‌ ಸಿಬಲ್‌ ಅವರು ನಕಲಿ ಗಾಂಧಿ ಕುಟುಂಬದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ

ಕಾಂಗ್ರೆಸ್ , ಕಪಿಲ್‌ ಸಿಬಲ್‌ ಮನೆ ಮೇಲೆ ತನ್ನ ಕಾರ್ಯಕರ್ತರಿಂದ ದಾಳಿ ಮಾಡಿಸುತ್ತದೆ.  ನಿಮ್ಮದು ಯಾವ ಟ್ರೆಂಡ್‌’’ ಎಂದು ಕಾಂಗ್ರೆಸ್ ಅನ್ನು ಪ್ರಶ್ನಿಸಿದೆ.’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News