ಭೂಕಂಪ ಪೀಡಿತ ಗ್ರಾಮಸ್ಥರಿಗೆ ತಾತ್ಕಾಲಿಕ ವ್ಯವಸ್ಥೆ: ಸಂಸದ ಡಾ. ಉಮೇಶ್ ಜಾಧವ್

Update: 2021-10-11 18:37 GMT

ಕಲಬುರಗಿ: ಚಿಂಚೋಳಿ ವಿವಿಧ ಪ್ರದೇಶಗಳಲ್ಲಿ ಭೂಕಂಪದ ಆಗುತ್ತಿರುವ ಪ್ರದೇಶಗಳಿಗೆ ಬೇರೆ ಕಡೆಯಲ್ಲಿ ತಾತ್ಕಾಲಿಕ ಶೇಡ್ ವ್ಯವಸ್ಥೆ ಮಾಡಲಾಗುವುದು ಗ್ರಾಮಸ್ ಎಚ್ಚರಿಕೆಯಿಂದ ಇರಬೇಕು ಎಂದು ಸಂಸದ ಡಾ. ಉಮೇಶ್ ಜಾಧವ್ ಮನವಿ ಮಾಡಿದ್ದಾರೆ.

ಅವರು ಇಂದು ಬೆಂಗಳೂರು ನಿವಾಸದಿಂದ ವಿಡಿಯೋ ಸಂದೇಶ ನೀಡುವ ಮೂಲಕ ಮಾತನಾಡಿದ ಅವರು ಕಳೆದ ಎರಡು ದಿನಗಳಿಂದ ಜೇವರ್ಗಿ ಸೇಡಂ, ಚಿಂಚೋಳಿ ಹಾಗೂ ಕಾಳಗಿ ಜಿಲ್ಲೆಯ ಪ್ರವಾಸ ಕೈಗೊಂಡು ಮಾಹಿತಿ ಪಡೆದುಕೊಂಡಿದ್ದು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಭೂಕಂಪ ಪೀಡಿತ ಪ್ರದೇಶದ ಜನರು ಮುನ್ನೆಚ್ಚರಿಕೆ ವಹಿಸಬೇಕು, ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ ಸಮಸ್ಯೆ ತಿಳಿದುಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಭೂ ವಿಜ್ಞಾನಿಗಳು ಪ್ರದೇಶವನ್ನು ವೀಕ್ಷಿಸಿದ್ದಾರೆ. ಮತ್ತೊಮ್ಮೆ ಅವರಿಗೆ ಭೇಟಿ ಸಮಸ್ಯೆಯ ಅಧ್ಯಾಯನ ನಡೆಸಲು ಸೂಚಿಸುತ್ತೇನೆ.

ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದು, ಮತ್ತೊಮ್ಮೆ ಮಾತನಾಡಿ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿ ಜಾಗೃತಿ ಮೂಡಿಸಲು ಹೇಳುತ್ತೇನೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಜನರ ನೆರವಿಗೆ ಸದಾಕಾಲ ತತ್ಪರತಾಗಿರಬೇಕೆಂದು ತಿಳಿಸಿದ್ದಾರೆ.

ಗ್ರಾಮಸ್ಥರು ಯಾವುದೇ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಮುನ್ನೆಚ್ಚರಿಕೆ ವಹಿಸಿ, ಜಾಗೃತವಾಗಿರಿ ಎಂದು ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News