ಹುದ್ದೆ ಕೊಡಿಸುವುದಾಗಿ ವಂಚನೆ: ಆಮಿಷಕ್ಕೆ ಒಳಗಾಗದಿರಲು ಕೆಎಸ್ಸಾರ್ಟಿಸಿ ಎಚ್ಚರಿಕೆ

Update: 2021-10-12 13:10 GMT

ಬೆಂಗಳೂರು, ಅ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಸಂಚಾರ ನಿರೀಕ್ಷಕ, ಸಂಚಾರ ನಿರೀಕ್ಷಕ ಹಾಗೂ ಭದ್ರತಾ ಅಧಿಕಾರಿ ಹುದ್ದೆಗಳಿಗೆ ಯಾವುದೇ ತರಹದ ಜಾಹೀರಾತು ಹೊರಡಿಸಿರದಿದ್ದರು, ನಿಗಮಕ್ಕೆ ಸಂಬಂಧಪಡದ ವ್ಯಕ್ತಿಗಳು ಹುದ್ದೆಗಳನ್ನು ಕೊಡಿಸುವುದಾಗಿ ಹಲವು ಅಭ್ಯರ್ಥಿಗಳಿಂದ ಅಕ್ರಮವಾಗಿ ಹಣ ಪಡೆದಿರುವುದು ಗಮನಕ್ಕೆ ಬಂದಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ.ಸಿ ಅವರು ತಿಳಿಸಿದ್ದಾರೆ. 

‘ನಿಗಮದಲ್ಲಿ ನಡೆಯುವಂತಹ ಎಲ್ಲಾ ನೇಮಕಾತಿಗಳಿಗೆ ಸಂಬಂಧಿಸಿದಂತೆ ಜಾಹೀರಾತುಗಳನ್ನು ದಿನಪತ್ರಿಕೆಗಳಲ್ಲಿ ಹಾಗೂ ನಿಗಮದ ಅಧಿಕೃತ ಜಾಲತಾಣ WWW.Ksrtcjobs. com ನಲ್ಲಿ ಪ್ರಕಟಿಸಲಾಗುವುದು; ಎಲ್ಲಾ ಅಭ್ಯರ್ಥಿಗಳ ಅರ್ಜಿಯನ್ನು ಅಂತರ್‍ಜಾಲದ ಮುಖಾಂತರ ಸ್ವೀಕರಿಸಲಾಗುತ್ತದೆ. ನೇಮಕಾತಿಯನ್ನು ನಿಯಮಾವಳಿಗಳ ಪ್ರಕಾರ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ಅಕ್ರಮ ಚಟುವಟಿಕೆ ಹೊಂದಿರುವುದಿಲ್ಲ’ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಯಾರಾದರೂ ಹುದ್ದೆಯನ್ನು ಕೊಡಿಸುವುದಾಗಿ ಆಮಿಷವೂಡ್ಡಿದಲ್ಲಿ, ಕೂಡಲೇ 7760990060, 7760990095 ಮತ್ತು 7760990011 ಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News