28 ವರ್ಷದ ಹಳೆಯ ನಕಲಿ ಮಾರ್ಕ್‌ಶೀಟ್ ಪ್ರಕರಣ:ಉತ್ತರಪ್ರದೇಶದ ಬಿಜೆಪಿ ಶಾಸಕನಿಗೆ 5 ವರ್ಷ ಜೈಲು ಶಿಕ್ಷೆ

Update: 2021-10-18 18:32 GMT
photo: twitter

ಅಯೋಧ್ಯೆ: ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಕಲಿ ಅಂಕಪಟ್ಟಿ ಬಳಸಿದ 28 ವರ್ಷದ ಹಳೆಯ ಪ್ರಕರಣದಲ್ಲಿ ಅಯೋಧ್ಯೆಯ ಗೋಸೈಗಂಜ್‌ನ ಬಿಜೆಪಿ ಶಾಸಕ ಇಂದ್ರ ಪ್ರತಾಪ್ ತಿವಾರಿಗೆ ಸೋಮವಾರ ವಿಶೇಷ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಪೂಜಾ ಸಿಂಗ್ ಅವರು ತೀರ್ಪು ನೀಡಿದರು. ಸಂಸದ/ಶಾಸಕರ ನ್ಯಾಯಾಲಯದಲ್ಲಿ ಹಾಜರಾಗಿದ್ದ ತಿವಾರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು.

ನ್ಯಾಯಾಲಯವು ತಿವಾರಿಗೆ ರೂ. 8,000 ದಂಡವನ್ನು ವಿಧಿಸಿದೆ.

ಇಂದ್ರ ಪ್ರತಾಪ್ ತಿವಾರಿ ಅಲಿಯಾಸ್ ಖಬ್ಬು ತಿವಾರಿ ಗೋಸೈಗಂಜ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ.

1992 ರಲ್ಲಿ ತಿವಾರಿ ವಿರುದ್ಧ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜಿನ ಆಗಿನ ಪ್ರಾಂಶುಪಾಲರಾದ ಯದುವಂಶ್ ರಾಮ್ ತ್ರಿಪಾಠಿಯವರು  ರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News