ಐಸಿಸಿ ಟ್ವೆಂಟಿ-20 ವಿಶ್ವಕಪ್: ಸ್ಕಾಟ್ಲೆಂಡ್ ಸೂಪರ್-12 ತಂಡಕ್ಕೆ ತೇರ್ಗಡೆ

Update: 2021-10-21 17:24 GMT
photo: ICC

ಅಲ್-ಅಮೆರಾತ್: ಒಮಾನ್ ತಂಡವನ್ನು 8 ವಿಕೆಟ್ ಗಳ ಅಂತರದಿಂದ ಮಣಿಸಿದ ಸ್ಕಾಟ್ಲೆಂಡ್ ತಂಡ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್-12ರ ಸುತ್ತಿಗೆ ತೇರ್ಗಡೆಯಾಗಿದೆ. ಸ್ಕಾಟ್ಲೆಂಡ್ ಬಿ ಗುಂಪಿನಲ್ಲಿ ಆಡಿರುವ ಎಲ್ಲ ಮೂರು ಪಂದ್ಯಗಳನ್ನು ಜಯಿಸಿ ಅಗ್ರ ಸ್ಥಾನದೊಂದಿಗೆ ಮುಂದಿನ ಸುತ್ತಿಗೆ ತಲುಪಿದೆ.

ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 123 ರನ್ ಗುರಿ ಪಡೆದ ಸ್ಕಾಟ್ಲೆಂಡ್ ತಂಡ 17 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಮ್ಯಾಥ್ಯೂ ಕ್ರಾಸ್(ಔಟಾಗದೆ 26, 35 ಎಸೆತ) ಹಾಗೂ ರಿಚಿ ಬ್ಯಾರಿಂಗ್ಟನ್(ಔಟಾಗದೆ 31, 21 ಎಸೆತ) ಸ್ಕಾಟ್ಲೆಂಡ್ ಗೆ ಗೆಲುವು ಖಚಿತಪಡಿಸಿದರು. ನಾಯಕ ಕೈಲ್ ಕೊಟ್ಝೆರ್(41, 28 ಎಸೆತ, 2 ಬೌಂ.3 ಸಿ.)ಸರ್ವಾಧಿಕ ಸ್ಕೋರ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News