ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ರಾಜ್ಯ ಸ್ಥಾನಮಾನ ಮರು ಸ್ಥಾಪನೆ:ಅಮಿತ್ ಶಾ

Update: 2021-10-24 17:50 GMT

ಶ್ರೀನಗರ,ಅ.24: ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಯ ಹಿನ್ನೆಲೆಯಲ್ಲಿ ನೂರಾರು ಜನರನ್ನು ಬಂಧಿಸಲಾಗಿದ್ದು,ಅವರ ಪೈಕಿ ಹಲವರ ವಿರುದ್ಧ ಸಾರ್ವಜನಿಕ ಭದ್ರತಾ ಕಾಯ್ದೆ (ಪಿಎಸ್ಎ)ಯನ್ನು ಹೇರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

900 ಜನರನ್ನು ಬಂಧಿಸಲಾಗಿದೆ ಎಂದು ಆಂಗ್ಲ ದೈನಿಕವೊಂದು ರವಿವಾರ ವರದಿ ಮಾಡಿದೆ.
ಜಮ್ಮು-ಕಾಶ್ಮೀರಕ್ಕೆ ಮೂರು ದಿನಗಳ ಭೇಟಿಗಾಗಿ ಶಾ ಶನಿವಾರ ಆಗಮಿಸಿದ್ದು,ಕೇಂದ್ರಾಡಳಿತ ಪ್ರದೇಶದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಡ್ರೋನ್ಗಳು ಮತ್ತು ಮೋಟರ್ ಬೋಟ್‌ ಗಳ ಕಣ್ಗಾವಲನ್ನು ನಿಯೋಜಿಸಲಾಗಿದೆ.

ಬಂಧಿಸಲ್ಪಟ್ಟವರಲ್ಲಿ ಕಲ್ಲು ತೂರಾಟಗಾರರು ಅಥವಾ ಉಗ್ರರ ಸಂಬಂಧಿಗಳು ಸೇರಿದ್ದಾರೆ. ಹೆಚ್ಚಿನವರ ವಿರುದ್ಧ ಪಿಎಸ್ಎ ಹೇರಲಾಗಿದೆ. ಕಳೆದೊಂದು ವಾರದಲ್ಲಿಯೇ ಸುಮಾರು 50 ಜನರನ್ನು ಈ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೊಲೀಸ್ ಕ್ರಮವನ್ನು ಟೀಕಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು,ಹಲವರನ್ನು ಕಾಶ್ಮೀರದ ಹೊರಗಿನ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಇಂತಹ ದಮನಕಾರಿ ಕ್ರಮಗಳು ಈಗಾಗಲೇ ಉದ್ವಿಗ್ನಗೊಂಡಿರುವ ವಾತಾವರಣವನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದು ಟ್ವೀಟಿಸಿದ್ದಾರೆ.

ರವಿವಾರ ಶಾ ಅವರು ಜಮ್ಮುವಿನಲ್ಲಿ ಐಐಟಿ ಕ್ಯಾಂಪಸ್ ಮತ್ತು ಹಲವಾರು ಇತರ ಯೋಜನೆಗಳನ್ನು ಉದ್ಘಾಟಿಸಿದರು. ಅವರು ರಾಜ್ಯದ ಬಿಜೆಪಿ ನಾಯಕರನ್ನೂ ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News