ಬೆಲೆ ಏರಿಕೆ ದೇಶವಾಸಿಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಿನನಿತ್ಯದ 'ಸರ್ಜಿಕಲ್ ಸ್ಟ್ರೈಕ್': ಕಾಂಗ್ರೆಸ್ ಟೀಕೆ

Update: 2021-10-24 12:31 GMT

ಬೆಂಗಳೂರು: ''ಪ್ರೈಸ್ ಹೈಕ್ ದೇಶವಾಸಿಗಳ ಮೇಲೆ ಬಿಜೆಪಿ ನಡೆಸುತ್ತಿರುವ ದಿನನಿತ್ಯದ ಸರ್ಜಿಕಲ್ ಸ್ಟ್ರೈಕ್!'' ಎಂದು ಕಾಂಗ್ರೆಸ್ ಟೀಕಿಸಿದೆ. 

ರವಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಪೆಟ್ರೋಲ್, ಡೀಸೆಲ್ ಬೆಲೆ ಯಶಸ್ವಿಯಾಗಿ ಶತಕ ದಾಟಿ ದ್ವಿಶತಕದತ್ತ ಮುನ್ನುಗ್ಗುತ್ತಿದೆ. 14 ವರ್ಷಗಳಲ್ಲಿ ಮೊದಲ ಬಾರಿ ಬೆಂಕಿಪೊಟ್ಟಣಗಳ ಬೆಲೆ ದ್ವಿಗುಣಗೊಂಡಿದೆ' ಎಂದು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಅಡುಗೆ ಅನಿಲದ ಬೆಲೆ 1000ದ ಗಡಿಯಲ್ಲಿದೆ. ಈ ಮೂಲಕ ದೇಶವಾಸಿಗಳ ಮೇಲೆ ಬಿಜೆಪಿ ದಿನನಿತ್ಯ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 

ಇನ್ನು ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್,  ''ನಮ್ಮ ಸರ್ಕಾರದ ಭಾಗ್ಯಗಳು ಮಧ್ಯವರ್ತಿಗಳ ಪಾಲಾಗಿವೆ ಎಂದಿರುವ ಸಿಎಂ ತಮ್ಮದೇ ಸರ್ಕಾರದ ಆಡಳಿತದಲ್ಲಿ ಪ್ರತಿನಿತ್ಯ ಬಡ ಜನರ ಪಡಿತರ, ಕಳ್ಳರ ಪಾಲಾಗುತ್ತಿರುವುದನ್ನು ಮರೆತರೇ? ಕೆಲ ದಿನಗಳ ಹಿಂದೆ ಅನ್ನಭಾಗ್ಯದ ಅಕ್ಕಿ ಗುಜರಾತ್‌ವರೆಗೂ ಕಳ್ಳಸಾಗಾಣಿಕೆಯಾಗುತ್ತಿರುವುದು ಬೆಳಕಿಗೆ ಬಂದಿತ್ತು, ಇದಕ್ಕೆ ಅವಕಾಶ ಕೊಟ್ಟವರು ಯಾರು?'' ಎಂದು ಸಿಎಂಗೆ ತಿರುಗೇಟು ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News