6000 ಸಿಬ್ಬಂದಿ ನೇಮಕಕ್ಕೆ ಎಮಿರೇಟ್ಸ್ ವಿಮಾನಸಂಸ್ಥೆ ನಿರ್ಧಾರ

Update: 2021-10-25 18:07 GMT

ದುಬೈ, ಅ.25: ಕೊರೋನ ಸೋಂಕಿನ ವಿರುದ್ಧದ ಲಸಿಕೀಕರಣ ಪ್ರಕ್ರಿಯೆ ಹೆಚ್ಚುತ್ತಿರುವ ಮತ್ತು ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ನಿರ್ಬಂಧ ಸಡಿಲಗೊಳ್ಳುತ್ತಿರುವುದರಿಂದ ಮುಂದಿನ 6 ತಿಂಗಳಿನಲ್ಲಿ 6 ಸಾವಿರಕ್ಕೂ ಅಧಿಕ ಸಿಬ್ಬಂದಿಗಳ ನೇಮಕಾತಿಗೆ ವಿಶ್ವದಾದ್ಯಂತ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಎಮಿೇಟ್ಸ್ ವಿಮಾನಯಾನ ಸಂಸ್ಥೆ ಹೇಳಿದೆ.

ಕೊರೋನ ಸೋಂಕಿಗೂ ಹಿಂದಿದ್ದ ಪ್ರಯಾಣ ಜಾಲಬಂಧದ 70%ದಷ್ಟು ದೇಶಗಳೊ0ದಿಗೆ 2021ರ ಅಂತ್ಯದೊಳಗೆ ಮತ್ತೆ ವಿಮಾನಸಂಚಾರ ಪುನರ್ ಆರಂಭಿಸುವ ಉದ್ದೇಶವಿದೆ. ವಿಮಾನಯಾನ ಸಂಸ್ಥೆಯ ಪ್ರಗತಿಗೆ ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿಗಳು ಹಾಗೂ ಗ್ರೌಂಡ್‌ಸ್ಟಾಫ್‌ಗಳ ಅಗತ್ಯವಿದೆ. ಜೊತೆಗೆ, ಅಧಿಕ ಸಾಮರ್ಥ್ಯದ ಡಬಲ್‌ಡೆಕರ್ ಎ380 ವಿಮಾನದ ಸಂಚಾರವನ್ನು ಹೆಚ್ಚುವರಿ ಆಸನ ಸಾಮರ್ಥ್ಯದೊಂದಿಗೆ ನವೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಎಮಿರೇಟ್ಸ್ ಏರ್‌ಲೈನ್ಸ್ ಗ್ರೂಫ್‌ನ ಅಧ್ಯಕ್ಷ ಮತ್ತು ಸಿಇಒ ಶೇಖ್ ಅಹ್ಮದ್ ಬಿನ್ ಸಯೀದ್ ಅಲ್ ಮಕ್ಟೂಮ್ ಹೇಳಿದ್ದಾರೆ.

ಸೆಪ್ಟಂಬರ್‌ನಲ್ಲಿ ಎಮಿರೇಟ್ಸ್ ಏರ್‌ಲೈನ್ ಸುಮಾರು 3000 ಕ್ಯಾಬಿನ್ ಸಿಬ್ಬಂದಿ ಹಾಗೂ 500 ವಿಮಾನ ನಿಲ್ದಾಣ ಸೇವಾ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಯನ್ನು ಜಾಗತಿಕ ಮಟ್ಟದಲ್ಲಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News