ಉರ್ದು ಭಾಷೆಯನ್ನು ಮೇಲೆತ್ತಲು ಝಮೀರ್ ಅಹ್ಮದ್, ಕಾಂಗ್ರೆಸ್ ಕೊಡುಗೆ ಏನು: ಚೇತನ್ ಅಹಿಂಸಾ ಪ್ರಶ್ನೆ

Update: 2021-10-27 13:57 GMT

ಬೆಂಗಳೂರು: ಉರ್ದು ಭಾಷೆಯನ್ನು ಮೇಲೆತ್ತಲು ಮಾಜಿ ಸಚಿವ ಝಮೀರ್ ಅಹ್ಮದ್ ಹಾಗೂ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ. 

ವಿಧಾನಸಭೆ ಉಪ ಚುನಾವಣೆ ಹಿನ್ನೆಲೆ  ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್, ಉರ್ದು ಭಾಷೆಯಲ್ಲೇ ಭಾಷಣ ಮಾಡುತ್ತಿರುವ ಕುರಿತು ಚೇತನ್ ಅಹಿಂಸಾ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.  

''ಉರ್ದು, ಕರ್ನಾಟಕದ ಹೆಮ್ಮೆಯ ಭಾಷೆ. ನಮ್ಮ ಬಿಜಾಪುರದ ಆದಿಲ್ ಶಾಹಿಗಳು ಉರ್ದುವಿನ ಭಾಷಾ ಪರಂಪರೆಗೆ ಬಹಳ ಹೆಚ್ಚಿನ ಕೊಡುಗೆಯನ್ನು ನೀಡಿದ್ದಾರೆ'' 

''ಜಮೀರ್ ಅಹಮ್ಮದ್ ಖಾನ್ ಅವರು ಸಿಂದಗಿಯಲ್ಲಿ ಉರ್ದು ಭಾಷಣಗಳ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಚುನಾವಣಾ ಅನುಕೂಲಕ್ಕಾಗಿ ಬಳಸಿಕೊಳ್ಳುವುದನ್ನು ಹೊರತು ಪಡಿಸಿ, ಉರ್ದುವಿನ ಉನ್ನತಿಗೆ ಜಮೀರ್ ಅಹಮ್ಮದ್ ಖಾನ್ ಅಥವಾ ಕಾಂಗ್ರೆಸ್ಸಿನ ಕೊಡುಗೆಯಾದರೂ ಏನು?'' ಎಂದು ಚೇತನ್ ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News