ಸರಕಾರಿ ಲಿವರ್ ಕಸಿ ಆಸ್ಪತ್ರೆ ಆರಂಭಿಸಲು ವಿಳಂಬ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

Update: 2021-10-27 15:25 GMT

ಬೆಂಗಳೂರು, ಅ.27: ಸರಕಾರಿ ಲಿವರ್(ಯಕೃತ್ತು) ಕಸಿ ಆಸ್ಪತ್ರೆ ಆರಂಭಿಸುವ ವಿಚಾರದಲ್ಲಿ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಎರಡು ವಾರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡಿದೆ.

ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಖಾಸಗಿ ಆಸ್ಪತ್ರೆಗಳ ಜತೆ ಅಧಿಕಾರಿಗಳು ಶಾಮೀಲಾದಂತಿದೆ. ಬಡ ಜನರ ಜೀವದೊಂದಿಗೆ ಅಧಿಕಾರಿಗಳು ಆಟವಾಡುತ್ತಿದ್ದಾರೆ. ಉದ್ದೇಶಪೂರ್ವಕ ವಿಳಂಬ ನೀತಿಯನ್ನು ಖಂಡಿಸುತ್ತೇವೆ. ಇದು ಸರಕಾರ ಕಾರ್ಯನಿರ್ವಹಿಸುವ ರೀತಿಯೇ? ನಾವು ಈ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ನ್ಯಾಯಪೀಠವು ಎಚ್ಚರಿಕೆ ನೀಡಿತು. 

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿನ ಕ್ಯಾಸ್ಟ್ರೋ ಎಂಟರಾಲಜಿ ಮತ್ತು ಲಿವರ್ ಕಸಿ ಕೇಂದ್ರ ಆರಂಭಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದು ಸರಕಾರ ಕಾರ್ಯನಿರ್ವಹಿಸುವ ರೀತಿಯೇ? ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ನಿರ್ದೇಶಕ ಯಾರು, ಕಾರ್ಯದರ್ಶಿ ಯಾರು? ಎಂದು ಪ್ರಶ್ನಿಸಿತು. ಎರಡು ವಾರಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡಿದೆ.

ಬೆಂಗಳೂರಿನಲ್ಲಿ ರಾಷ್ಟ್ರದ ಎರಡನೆ ಸರಕಾರಿ ಗ್ಯಾಸ್ಟ್ರೋ ಎಂಟರಾಲಜಿ ಲಿವರ್ ಕಸಿ ಕೇಂದ್ರ ಸ್ಥಾಪನೆ ಸುದೀರ್ಘ ವಿಳಂಬವಾಗಿದೆ. 2016ರಲ್ಲಿಯೇ ಅನುಮೋದನೆ ದೊರೆತಿದ್ದ ಈ ಕೇಂದ್ರಕ್ಕೆ 2018 ರಲ್ಲಿಯೇ ನಿರ್ದೇಶಕರ ನೇಮಕವಾಗಿತ್ತು. ಆದರೆ ಆಸ್ಪತ್ರೆ ಆರಂಭ ವಿಳಂಬವಾದುದರಿಂದ ಕೂಡಲೇ ಮೂಲಸೌಕರ್ಯ ಒದಗಿಸುವಂತೆ ಹೈಕೋರ್ಟ್ ಕಳೆದ ಪೆಬ್ರವರಿ ತಿಂಗಳಲ್ಲೇ ನಿರ್ದೇಶನ ನೀಡಿತ್ತು. ಹೈಕೋರ್ಟ್ ನಿರ್ದೇಶನದ ಬಳಿಕ ಜುಲೈ ತಿಂಗಳಲ್ಲಿ ಉದ್ಘಾಟನೆಗೊಂಡಿದ್ದ ಆಸ್ಪತ್ರೆ ಕೇವಲ ಹೊರರೋಗಿಗಳಿಗಷ್ಟೇ ಸೀಮಿತವಾಗಿದೆ.

ಹೊಸ ಕಟ್ಟಡವಾಗಿರುವುದರಿಂದ ಸ್ಯಾನಿಟೈಸ್ ಮಾಡಲು ಎರಡು ತಿಂಗಳು ಕಾಲಾವಕಾಶ ಕೇಳಿದ್ದು ಪೀಠದ ಅಸಮಾಧಾನಕ್ಕೆ ಕಾರಣವಾಗಿದೆ. ಜುಲೈನಲ್ಲೇ ಉದ್ಘಾಟನೆ ಆದರೂ ಇನ್ನೂ ಸ್ಯಾನಿಟೈಸ್ ಮಾಡಿಲ್ಲವೇಕೆ. ಬೇಕೆಂದೇ ಅಧಿಕಾರಿಗಳು ವಿಳಂಬ ಮಾಡಿರುವಂತಿದೆ ಎಂದು ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News