ಹಾನಗಲ್ ಉಪ ಚುನಾವಣೆ: ಮೂರು ಕಡೆ ಮತಯಂತ್ರಗಳಲ್ಲಿ ದೋಷ

Update: 2021-10-30 05:33 GMT
ಸಾಂದರ್ಭಿಕ ಚಿತ್ರ (Photo source: PTI)

ಹಾವೇರಿ, ಅ.30: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬೆಳಗ್ಗೆ 7ರಿಂದ ಆರಂಭಗೊಂಡಿದ್ದು, 263 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 8.77 ಶೇ. ಹಕ್ಕು ಚಲಾವಣೆಯಾಗಿತ್ತು. ಈ ನಡುವೆ ಮೂರು ಬೂತ್ ಗಳಲ್ಲಿ ಮತಯಂತ್ರ ಕೈಕೊಟ್ಟಿತ್ತು.

ಕ್ಷೇತ್ರ ವ್ಯಾಪ್ತಿಯಲ್ಲಿ 239 ಮೂಲ ಹಾಗೂ 24 ಹೆಚ್ಚುವರಿ ಸೇರಿದಂತೆ ಒಟ್ಟು 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 

ಬೆಳಗ್ಗೆ ಮೂರು ಬೂತ್ ಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಸೆಕ್ಟರ್ 1ರ ಬೂತ್ ಸಂಖ್ಯೆ 8, ಸೆಕ್ಟರ್ 28ರ ಬೂತ್ ಸಂಖ್ಯೆ 211 ಹಾಗೂ ಹನುಮಸಾಗರ ಗ್ರಾಮದಲ್ಲೂ ಮತಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

ಹಾನಗಲ್ ವಿಧಾನಸಭಾ ವ್ಯಾಪ್ತಿಯಲ್ಲಿ 1,05,525 ಪುರುಷ ಮತದಾರರು, 98,953 ಮಹಿಳಾ ಮತದಾರರು ಹಾಗೂ 3 ಇತರ ಮತದಾರರು ಇದ್ದಾರೆ.

33 ಸೂಕ್ಷ್ಮ ಮತ್ತು 3 ಅತಿಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಶಾಂತಿಯುತ ಮತದಾನಕ್ಕಾಗಿ ಸೂಕ್ತ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News