ಸಿಯೇರಾ ಲಿಯೋನ್‌ ನಲ್ಲಿ ತೈಲ ಟ್ಯಾಂಕರ್‌ ಸ್ಫೋಟ: 92 ಮಂದಿ ಮೃತ್ಯು, ನೂರಾರು ಮಂದಿಗೆ ಗಾಯ

Update: 2021-11-06 17:27 GMT
Photo: Twitter/BBC News Africa

ಫ್ರೀಟೌನ್,ನ.6: ಸಿಯೋರಾ ಲಿಯೋನ್‌ನ ರಾಜಧಾನಿ ಫ್ರೀಟೌನ್ ಸಮೀಪ ಶನಿವಾರ ತೈಲ ಟ್ಯಾಂಕರ್‌ಸ್ಫೋಟಿಸಿ ಕನಿಷ್ಠ 92 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಟ್ಯಾಂಕರ್‌ನಿಂದ ಸೋರಿಕೆಯಾಗುತ್ತಿದ್ದ ಪೆಟ್ರೋಲನ್ನು ಸಂಗ್ರಹಿಸಲು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಸಂದರ್ಭ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಹಾಗೂ ಪ್ರತ್ಯಕ್ಷದರ್ಶಿಗಳು ಶನಿವಾರ ತಿಳಿಸಿದ್ದಾರೆ.

ಫ್ರೀಟೌನ್‌ನ ಉಪನಗರ ವೆಲ್ಲಿಂಗ್ಟನ್‌ನಲ್ಲಿ ಶುಕ್ರವಾರ ತಡರಾತ್ರಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳ ಬಳಿಕ ಈ ಸ್ಫೋಟ ಸಂಭವಿಸಿದೆ ಎಂದವರು ತಿಳಿಸಿದ್ದಾರೆ.

ತೈಲಟ್ಯಾಂಕರ್ ಸ್ಫೋಟದಲ್ಲಿ ಮೃತಪಟ್ಟ 92 ಮಂದಿ ಶವಗಳನ್ನು ನಗರದ ಕನ್ನೌಟ್ ಆಸ್ಪತ್ರೆಯಲ್ಲಿ ಶವಾಗಾರದಲ್ಲಿಡಲಾಗಿದೆ. ಇನ್ನೂ 30 ಮಂದಿಗೆ ಗಂಭೀರವಾದ ಸುಟ್ಟಗಾಯಗಳಾಗಿದ್ದು, ಅವರು ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸ್ಫೋಟದ ತೀವ್ರತೆಯಿಂದಾಗಿ ಆಕಾಶದೆತ್ತರಕ್ಕೆ ಬೆಂಕಿಯ ಉಂಡೆಗಳು ಚಿಮ್ಮುತ್ತಿರುವುದು ಕಂಡುಬಂದಿತ್ತು ಮತ್ತು ಹಲವಾರು ಮಂದಿ ದೇಹಗಳು ಛಿದ್ರಗೊಂಡು ಭಾರೀ ದೂರದವರೆಗೆ ಚಿಮ್ಮಿಬಿದ್ದಿದ್ದವು. ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸ್ಕಾಟ್ಲೆಂಡ್‌ನ ಗ್ಲಾಸ್ಗೋ ನಗರದಲ್ಲಿರುವ ಸಿಯೋರಾ ಲಿಯೋನಾದ ಅಧ್ಯಕ್ಷ ಜೂಲಿಯಸ್ ಮಾಡಾ ಬಿಯೋ ಅವರು ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News