ಇಕ್ವೆಡೋರ್: ಜೈಲಿನಲ್ಲಿ ಹಿಂಸಾಚಾರ; ಕನಿಷ್ಟ 68 ಕೈದಿಗಳ ಮೃತ್ಯು, ಹಲವರಿಗೆ ಗಾಯ

Update: 2021-11-14 18:31 GMT

ಕ್ವಿಟೊ, ನ.14: ಇಕ್ವೆಡೋರ್ನ ದಕ್ಷಿಣದ ನಗರ ಗ್ವಯಾಕ್ವಿಲ್ನಲ್ಲಿರುವ ಜೈಲಿನಲ್ಲಿ ಶನಿವಾರ ರಾತ್ರಿ ನಡೆದ ಹಿಂಸಾಚಾರದಲ್ಲಿ ಕನಿಷ್ಟ 68 ಕೈದಿಗಳು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಕೈದಿಗಳ ಎರಡು ವಿರೋಧಿ ಗುಂಪುಗಳ ಮಧ್ಯೆ ಆರಂಭವಾದ ಘರ್ಷಣೆ ಹಿಂಸಾಚಾರಕ್ಕೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೆನಿಟೆನ್ಶಿಯಾರಿಯ ಡೆಲ್ ಲಿಟೋರಲ್ ಜೈಲಿನಲ್ಲಿ ಹಿಂಸಾಚಾರ ನಡೆದಿದೆ. ಇದೇ ಜೈಲಿನಲ್ಲಿ ಸೆಪ್ಟಂಬರ್ನಲ್ಲೂ ಘರ್ಷಣೆ ಮ

ತ್ತು ಹಿಂಸಾಚಾರ ನಡೆದು 119 ಕೈದಿಗಳು ಮೃತರಾಗಿದ್ದರು. ಜೈಲಿನ ಕೈದಿಗಳ ಮೇಲೆ ನಿಯಂತ್ರಣ ಸಾಧಿಸಲು 2 ತಂಡಗಳೊಳಗೆ ನಡೆದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿದೆ ಎಂದು ಸರಕಾರ ಹೇಳಿದೆ. ಜೈಲಿನ ಅಧಿಕಾರಿಗಳ ವೈಫಲ್ಯದಿಂದ ಹಲವರ ಪ್ರಾಣಹಾನಿಯಾಗಿದೆ ಎಂದು ಕೈದಿಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News