ಗುರುಗ್ರಾಮ: ನಮಾಝ್‌ ಗೆ ತನ್ನ ಖಾಸಗಿ ಸ್ಥಳ ಕೊಡಲು ಮುಂದೆ ಬಂದ ಅಕ್ಷಯ್ ರಾವ್

Update: 2021-11-17 08:56 GMT
ಸಾಂದರ್ಭಿಕ ಚಿತ್ರ (PTI)

ಗುರುಗ್ರಾಮ: ಗುರುಗ್ರಾಮದಲ್ಲಿ ನಿಗದಿತ ಸಾರ್ವಜನಿಕ ಸ್ಥಳಗಳಲ್ಲಿ ಶುಕ್ರವಾರದ ನಮಾಝ್ ಸಲ್ಲಿಕೆಗೆ ಹಿಂದುತ್ವ ಸಂಘಟನೆಗಳು ಹಾಗೂ ಹಲವಾರು ಸ್ಥಳೀಯರ ಸತತ ವಿರೋಧದ ನಡುವೆಯೇ ಅಲ್ಲಿನ ನಿವಾಸಿಯಾದ ಅಕ್ಷಯ್ ರಾವ್ ಎಂಬವರು ತಾವು ಹಳೆ ಗುರುಗ್ರಾಮದಲ್ಲಿ ಹೊಂದಿರುವ ಸಣ್ಣ ವಾಣಿಜ್ಯ ಸ್ಥಳವನ್ನು ನಮಾಝ್ ಸಲ್ಲಿಕೆಗೆ ನೀಡಲು ಮುಂದೆ ಬಂದಿದ್ದಾರೆ ಎಂದು timesofindia ವರದಿ ಮಾಡಿದೆ.

ಮೆಕ್ಯಾನಿಕ್ ಮಾರ್ಕೆಟ್‌ನಲ್ಲಿ ಹಲವಾರು ಮಳಿಗೆಗಳನ್ನು ಹೊಂದಿರುವ ವನ್ಯಜೀವಿ ಪ್ರವಾಸ ಸಂಘಟಕ ಅಕ್ಷಯ್ ರಾವ್ ಎಂಬವರು ಈ ಕುರಿತು ಮಾತನಾಡುತ್ತಾ ತಮ್ಮ ಹಲವಾರು ಬಾಡಿಗೆದಾರರು ಮುಸ್ಲಿಮರಾಗಿದ್ದು ಶುಕ್ರವಾರ ನಮಾಝ್ ಸಲ್ಲಿಕೆಗೆ ತೊಂದರೆ ಅನುಭವಿಸುತ್ತಿದ್ದಾರೆ. ತಾವು ಖಾಲಿ ಬಿದ್ದಿರುವ ತಮ್ಮ ಒಂದು ಮಳಿಗೆಯನ್ನು ನಮಾಝ್‌ಗೆ ನೀಡುವುದಾಗಿ ಹಾಗೂ ಇಲ್ಲಿ 15-20 ಮಂದಿ ನಮಾಝ್ ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಕೆಲ ವರ್ಷಗಳ ಹಿಂದೆ ಕೂಡ ನಮಾಝ್‌ಗೆ ಸ್ಥಳ ಒದಗಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಅಕ್ಷಯ್ ಅವರ ಕೊಡುಗೆಯನ್ನು ಸ್ವಾಗತಿಸಿದ ಮುಸ್ಲಿಂ ಸಮುದಾಯ ಈ ಕುರಿತು ತಮಗೆ ಇನ್ನಷ್ಟೇ ಔಪಚಾರಿಕ ಪ್ರಸ್ತಾವನೆ ದೊರೆಯಬೇಕು ಎಂದಿದ್ದಾರೆ. ಅದೇ ಸಮಯ ಖಾಸಗಿ ಸ್ಥಳಗಳಲ್ಲಿ ನಮಾಝ್ ಸಲ್ಲಿಕೆ ಈ ಸಮಸ್ಯೆಗ ಪರಿಹಾರ ಒದಗಿಸದು ಏಕೆಂದರೆ ಹಿಂದೆ ಕೂಡ ಹೀಗೆ ಮಾಡಿದಾಗ ನೆರೆಹೊರೆಯವರಿಂದ ಆಕ್ಷೇಪಣೆಗಳು ಬಂದಿದ್ದವು ಎಂದು ಮುಸ್ಲಿಂ ಮುಖಂಡರು ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News