ಬಿಟ್ ಕಾಯಿನ್ ಪ್ರಕರಣ: ಶ್ರೀಕಿ ನಿಜಕ್ಕೂ ನಾಪತ್ತೆಯಾಗಿದ್ದಾನೋ, ಸರಕಾರವೇ ಆತನನ್ನು ಅಡಗಿಸಿದೆಯೋ; ಕಾಂಗ್ರೆಸ್ ಪ್ರಶ್ನೆ

Update: 2021-11-27 11:22 GMT

ಬೆಂಗಳೂರು, ನ. 27: `ಅಂತರ್ ರಾಷ್ಟ್ರೀಯ ಮಟ್ಟದ ಬಹುದೊಡ್ಡ ಹಗರಣದ ಪ್ರಮುಖ ಆರೋಪಿಯ ಸುಳಿವಿಲ್ಲವಂತೆ ಪೊಲೀಸರಿಗೆ! ಬಿಜೆಪಿ ಆಡಳಿತದ ಪೊಲೀಸ್ ವ್ಯವಸ್ಥೆಗೆ ಇದು ನಾಚಿಕೆಗೇಡಿನ ಸಂಗತಿ' ಎಂದು ಕಾಂಗ್ರೆಸ್, ಬಿಟ್ ಕಾಯಿನ್ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಶ್ರೀಕೃಷ್ಣ ಯಾನೆ ಶ್ರೀಕಿ ನಾಪತ್ತೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಆರೋಪಿ ನಿಜಕ್ಕೂ ನಾಪತ್ತೆಯಾಗಿದ್ದಾನೋ? ಸರಕಾರವೇ ಆತನನ್ನು ಅಡಗಿಸಿದೆಯೋ? ಆತನ ಜೀವಕ್ಕೆ ಅಪಾಯವಿರುವ ಆತಂಕದ ನಡುವೆ ಆತನ ಕಣ್ಮರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ' ಎಂದು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದೆ.

ವಿಶೇಷ ಪ್ಯಾಕೇಜ್ ಘೋಷಿಸಿ: `ಬಿಜೆಪಿ ಸರಕಾರದಲ್ಲಿ ರೈತಾಪಿ ವರ್ಗ ಬದುಕಲಾರದ ಸ್ಥಿತಿಗೆ ತಲುಪಿದೆ, ಒಂದು ಕಡೆ ರೈತ ವಿರೋಧಿ ಧೋರಣೆಯ ಸರಕಾರದ ಅನೀತಿಗಳು, ಮತ್ತೊಂದು ಕಡೆ ನೈಸರ್ಗಿಕ ವಿಕೋಪಗಳಿಂದ ರೈತರು ಝರ್ಜರಿತರಾಗಿದ್ದಾರೆ. ಬಿಜೆಪಿಗೆ ನಿಜಕ್ಕೂ ರೈತಪರ ಕಾಳಜಿ ಇದ್ದರೆ ಮೂರು ವರ್ಷದಿಂದ ನಿರಂತರ ನಷ್ಟ ಅನುಭವಿಸಿದ ರೈತರಿಗೆ ವಿಶೇಷ ಪ್ಯಾಕೇಜ್ ನೆರವು ಘೋಷಿಸಲಿ' ಎಂದು ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News