ಓಮಿಕ್ರಾನ್ ವೈರಾಣು ಸೋಂಕು ತಡೆ: ಈ ಬಾರಿಯಾದರೂ ಸರಕಾರ ಎಚ್ಚರದಿಂದ ಕೆಲಸ ಮಾಡಬೇಕು; ಡಿ.ಕೆ.ಶಿವಕುಮಾರ್

Update: 2021-11-28 18:34 GMT

ಬೆಂಗಳೂರು, ನ. 28: `ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಸರಕಾರವು ಹೊಸ ರೂಪಾಂತರಿ ಕೋವಿಡ್ ವೈರಸ್ ಅನ್ನು ನಿರ್ಲಕ್ಷಿಸದೆ ಹೊರದೇಶದಿಂದ ಬರುವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ಕ್ವಾರಂಟೈನ್ ಮುಗಿದ ನಂತರವಷ್ಟೇ ಜನವಸತಿ ಪ್ರದೇಶಗಳ ಪ್ರವೇಶಕ್ಕೆ ಅವಕಾಶ ನೀಡಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಸಲಹೆ ನೀಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಈ ಹಿಂದೆ ರಾಜ್ಯ ಸರಕಾರ ತಡವಾಗಿ ಕ್ರಮ ಕೈಗೊಂಡ ಕಾರಣ ಜನರು ಆಕ್ಸಿಜನ್, ಕೋವಿಡ್ ಔಷಧಗಳು ಸಿಗದೆ ಪರಿತಪಿಸಿದರು. ಕೋವಿಡ್ ರೂಪಾಂತರಿ ಓಮಿಕ್ರಾನ್ ಭೀತಿ ಜಗತ್ತಿನಾದ್ಯಂತ ಹೆಚ್ಚಾಗಿದೆ. ಬೆಂಗಳೂರು ಪ್ರವೇಶಿಸುವ ದಿನಗಳು ದೂರವಿಲ್ಲ. ಈ ಬಾರಿಯಾದರೂ ಸರಕಾರ ಎಚ್ಚರದಿಂದ ಕೆಲಸ ಮಾಡಬೇಕು' ಎಂದು ಮನವಿ ಮಾಡಿದ್ದಾರೆ.

`ಕರುನಾಡು ಹೆಜ್ಜೇನಿನ ಗೂಡು. ನಾವೆಷ್ಟು ಸಿಹಿಯೋ, ಕರ್ನಾಟಕದ ಸಂಸ್ಕೃತಿ, ಸ್ವಾಭಿಮಾನಕ್ಕೆ ಕಲ್ಲೆಸೆದಾಗ, ಕನ್ನಡಿಗರು ಅಷ್ಟೇ ಸಿಟ್ಟು, ಸೆಡವು ತೋರಿದ್ದೇವೆ. ಈ ವಾರ ನಾನು ಕೇಳೋ ಒಂದು ಪ್ರಶ್ನೆ ಕನ್ನಡ ನಾಡಿನ ಪರಂಪರೆಗೆ ಸಂಬಂಧಿಸಿದ್ದು. ಕನ್ನಡದ ಸಿಂಹಗಳು ಹೋರಾಟಕ್ಕೆ ಸಜ್ಜಾಗಬೇಕಿದೆ' 

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News