ಪರಾಗ್ ಅಗರವಾಲ್ ಟ್ವಿಟರ್ ಸಿಇಒ ಆದ ಬಳಿಕ ಭಾರತೀಯರ ಬಗ್ಗೆ ಎಲಾನ್ ಮಸ್ಕ್ ಹೇಳಿದ್ದೇನು?

Update: 2021-11-30 06:33 GMT
ಎಲಾನ್ ಮಸ್ಕ್ (PTI)

ಹೊಸದಿಲ್ಲಿ: ಭಾರತೀಯ ಮೂಲದ ಪರಾಗ್ ಅಗರವಾಲ್ ಅವರನ್ನು ಟ್ವಿಟರ್ ಸಿಇಒ ಆಗಿ ನೇಮಕಗೊಳಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್, ಅಮೆರಿಕಾದಲ್ಲಿರುವ ಭಾರತೀಯ ಪ್ರತಿಭೆಗಳನ್ನು ಹಾಡಿ ಹೊಗಳಿದ್ದಾರೆ.

"ಭಾರತೀಯ ಪ್ರತಿಭೆಯಿಂದ ಅಮೆರಿಕಾ ಬಹಳಷ್ಟು ಪ್ರಯೋಜನ ಪಡೆಯುತ್ತಿದೆ,'' ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.

ಮೈಕ್ರೋಸಾಫ್ಟ್, ಗೂಗಲ್ ಹಾಗೂ ಐಬಿಎಂ ನಂತಹ ಉನ್ನತ ಟೆಕ್ ಕಂಪೆನಿಗಳ ಅತ್ಯುನ್ನತ ಹುದ್ದೆಯಲ್ಲಿ ಭಾರತೀಯ ಮೂಲದ ವ್ಯಕ್ತಿಗಳಿರುವ ಕುರಿತಂತೆ ಒಬ್ಬರ ಟ್ವೀಟ್‌ಗೆ ಇಲಾನ್ ಮಸ್ಕ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

"ಗೂಗಲ್, ಮೈಕ್ರೋಸಾಫ್ಟ್, ಐಬಿಎಂ, ಪಾಲೊ ಆಲ್ಟೋ ನೆಟ್‌ವರ್ಕ್ಸ್ ಹಾಗೂ ಈಗ ಟ್ವಿಟರ್ ಅನ್ನು ಭಾರತದಲ್ಲಿ ಬೆಳೆದ ಸಿಇಒಗಳು ನಡೆಸುತ್ತಿದ್ದಾರೆ. ತಂತ್ರಜ್ಞಾನ ಜಗತ್ತಿನಲ್ಲಿ ಭಾರತೀಯರ ಅಭೂತಪೂರ್ವ ಯಶಸ್ಸು ಹಾಗೂ ವಲಸಿಗರಿಗೆ ಅಮೆರಿಕಾ ಒದಗಿಸುತ್ತಿರುವ ಅವಕಾಶದ ಒಂದು ಒಳ್ಳೆಯ ಜ್ಞಾಪನೆಯಾಗಿದೆ, ಅಭಿನಂದನೆಗಳು.'' ಎಂದು ಪ್ಯಾಟ್ರಿಕ್ ಕಾಲ್ಲಿಸನ್ ಎಂಬವರು ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಇಲಾನ್ ಮಸ್ಕ್ ಅವರ ಮೇಲಿನ ಟ್ವೀಟ್ ಬಂದಿತ್ತು.

ಈಗಾಗಲೇ ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಸಿಇಒ ಆಗಿ ಸುಂದರ್ ಪಿಚೈ ಹಾಗೂ ಮೈಕ್ರೋಸಾಫ್ಟ್ ಸಿಇಒ ಆಗಿ ಸತ್ಯ ನಡೆಲ್ಲಾ ಇದ್ದರೆ ಅವರ ಸಾಲಿಗೆ ಪರಾಗ್ ಸೇರ್ಪಡೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News