ಚಾಮರಾಜನಗರದ ಕಾಡಂಚಿನ ಗ್ರಾಮದೊಳಗೆ ಹುಲಿ ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು

Update: 2021-11-30 17:05 GMT

ಚಾಮರಾಜನಗರ: ಜಿಲ್ಲೆಯ.ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ  ಹುಲಿಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಗ್ರಾಮದ ಜನ ಆತಂಕ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿ ಬೆಟ್ಟದಮಾದಹಳ್ಳಿ ಗ್ರಾಮದ ಶಿವಕುಮಾರ್ ಎಂಬುವವರ ಜಮೀನಿನಲ್ಲಿ  ಹುಲಿ ಬೀಡುಬಿಟ್ಟಿದೆ ಎನ್ನಲಾಗುತ್ತಿದೆ. 

ಈ ವಿಚಾರ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಲಾಗಿದ್ದು ಸ್ಥಳಕ್ಕಾಗಮಿಸಿದ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಗುಂಡ್ಲುಪೇಟೆ ಬಪರ್ ಜೋನ್ ವಲಯದ ಎಸಿಎಫ್ ಪರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಒಂದು ತಿಂಗಳ ಹಿಂದಷ್ಟೇ ಗ್ರಾಮದಲ್ಲಿ ಜಾನುವಾರೊಂದನ್ನು ಎಳೆದೊಯ್ದ ತಿಂದು ಹಾಕಿತ್ತು ಈಗ ಮತ್ತೆ ಹುಲಿಯೊಂದು ಜೆ ಅಡಗಿಕೊಂಡಿದೆ ಎಂಬ ವಿಚಾರ ತುಂಬಾ ಆತಂಕವನ್ನುಂಟುಮಾಡಿದೆ ಎಂದು ಸ್ಥಳೀಯರಾದ ಷಣ್ಮುಗಂ ಕಳವಳ ವ್ಯಕ್ತಪಡಿಸಿದ್ದಾರೆ.

ಕೊಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ಸಿಬ್ಬಂದಿ  ಹುಲಿಯನ್ನು ನೋಡಿರುವುದಾಗಿಯೂ ಮತ್ತು ಅದು ವಾಪಾಸ್ ಕಾಡಿಗೆ ತೆರಳಿರಬಹುದು ಎಂಬ ಮಾಹಿತಿ ನೀಡಿದ್ದಾರೆ ಎಂದು ಎಸಿಎಫ್ ಪರಮೇಶ್ ತಿಳಿಸಿದರು.

ಇನ್ನು ಸ್ಥಳದಲ್ಲೇ ಬೀಡುಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News