ಕೊರೋನ ರೂಪಾಂತರಿ ಪರೀಕ್ಷೆ: ಪ್ರಮಾಣಿತ ಪ್ರಯೋಗ ಶಾಲೆಗಳಿಗೆ ಕಳುಹಿಸುವುದು ಕಡ್ಡಾಯ

Update: 2021-12-01 16:36 GMT

ಬೆಂಗಳೂರು, ಡಿ.1: ಕೋವಿಡ್-19 ಖಚಿತ ಪ್ರಕರಣಗಳ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‍ಗಾಗಿ ರಾಜ್ಯದಲ್ಲಿರುವ INSACOG ಪ್ರಮಾಣಿತ ಪ್ರಯೋಗ ಶಾಲೆಗಳಿಗೆ ಮಾರ್ಗಸೂಚಿಗಳ ಅನ್ವಯ ಕಳುಹಿಸುವುದು ಕಡ್ಡಾಯವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಈಗಾಗಲೇ ಗುರುತಿಸಲಾಗಿರುವ ರಾಜ್ಯದ 10 ಸೆಂಟಿನೆಲ್ ಕೇಂದ್ರಗಳ ಮೂಲಕ INSACOG ಪ್ರಮಾಣಿತ ನಿಮ್ಹಾನ್ಸ್ ಹಾಗೂ ಎನ್‍ಸಿಬಿಎಸ್ ಪ್ರಯೋಗಶಾಲೆಗಳಿಗೆ ಕಳುಹಿಸಲು ಸೂಚಿಸಲಾಗಿದೆ.  

ಕ್ಲಸ್ಟರ್ ಮಾದರಿಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರೂಪಾಂತರಿಗಳನ್ನು ತಿಳಿಯುವ ನಿಟ್ಟಿನಲ್ಲಿ ಜೀನೋಮ್ ಸೀಕ್ವೆನ್ಸಿಂಗ್ ಚಟುವಟಿಕೆಯ ಪಾತ್ರವು ಪ್ರಮುಖವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News