ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕನಿಷ್ಠ ಒಂದು ವಾರ ವಿಳಂಬ: ವರದಿ

Update: 2021-12-02 09:03 GMT

ಹೊಸದಿಲ್ಲಿ: ಓಮೈಕ್ರಾನ್ ಭೀತಿಯ ಮಧ್ಯೆ ಭಾರತದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಪ್ರವಾಸವು ಕನಿಷ್ಠ ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನವೈರಸ್‌ನ ಓಮೈಕ್ರಾನ್ ರೂಪಾಂತರವನ್ನು ಪತ್ತೆಹಚ್ಚಿದ ನಂತರ ಕ್ರಿಕೆಟ್  ಸರಣಿ ಮುಂದೂಡಿಕೆಗಾಗಿ ಬಿಸಿಸಿಐ ಕ್ರಿಕೆಟ್ ದಕ್ಷಿಣ ಆಫ್ರಿಕಾದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಭಾರತ 'ಎ' ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಬಿಸಿಸಿಐ ಇನ್ನೂ ಆ ಪ್ರವಾಸವನ್ನು ರದ್ದುಗೊಳಿಸಲು ಮುಂದಾಗಿಲ್ಲ. ಹಿರಿಯ ಕ್ರಿಕೆಟ್ ತಂಡದ ಪ್ರವಾಸವನ್ನು ವಿಳಂಬಗೊಳಿಸುವ ಬಗ್ಗೆ ಕ್ರಿಕೆಟ್ ಮಂಡಳಿ ಗಂಭೀರವಾಗಿ ಪರಿಗಣಿಸುತ್ತಿದೆ. ಭಾರತೀಯ ಕ್ರಿಕೆಟ್ ತಂಡವು ಡಿಸೆಂಬರ್ 9 ರಂದು ಚಾರ್ಟರ್ ಫ್ಲೈಟ್ ಮೂಲಕ ದ.ಆಫ್ರಿಕಾಕ್ಕೆ ನಿರ್ಧರಿಸಲಾಗಿತ್ತು. ಆದರೆ ಮೂಲಗಳ ಪ್ರಕಾರ ಅದನ್ನು ತಡೆಹಿಡಿಯಲಾಗಿದೆ.

ಅದರಂತೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡಗಳ ಆಯ್ಕೆಯನ್ನೂ ಮುಂದೂಡಲಾಗಿದೆ. ನ್ಯೂಝಿಲ್ಯಾಂಡ್ ವಿರುದ್ಧದ ಭಾರತದ ಮೊದಲ ಟೆಸ್ಟ್ ನಂತರ ಆಯ್ಕೆ ಸಭೆ ನಡೆಯಬೇಕಿತ್ತು. ಆದರೆ ಭಾರತೀಯ ಕ್ರಿಕೆಟ್ ಮಂಡಳಿಯು ತನ್ನ ದಕ್ಷಿಣ ಆಫ್ರಿಕಾದ ಸಹವರ್ತಿಯೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡಿರುವುದರಿಂದ ಮುಂದಿನ ಹಾದಿಯ ಬಗ್ಗೆ ಸ್ಪಷ್ಟತೆ ಪಡೆದ ನಂತರ ಆಯ್ಕೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಮೂರು ಟೆಸ್ಟ್, ಮೂರು ಏಕದಿನ ಹಾಗೂ ನಾಲ್ಕು ಟಿ-20 ಪಂದ್ಯಗಳನ್ನು ಆಡಲು ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ಶಿಬಿರದಲ್ಲಿ ಕೋವಿಡ್ ಏಕಾಏಕಿ ಕಾಣಿಸಿಕೊಂಡ ನಂತರ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಆಡಲು ಭಾರತ ತಂಡ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News