ಶಿವಮೊಗ್ಗ: ಫೇಸ್ ಬುಕ್‌ನಲ್ಲಿ ಪರಿಚಯಗೊಂಡ ಯುವತಿಯಿಂದ ವಂಚನೆ ಆರೋಪ; ಯುವಕನಿಂದ ದೂರು

Update: 2021-12-02 11:48 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಡಿ.02: ಫೇಸ್ ಬುಕ್‌ನಲ್ಲಿ ಪರಿಚಯವಾದ ಯುವತಿ ವಿರುದ್ಧ ಯುವಕನೊಬ್ಬ ದೂರು ನೀಡಿದ್ದಾನೆ.

ತನ್ನೊಂದಿಗೆ ಸಲುಗೆಯಿಂದ ಇದ್ದು, ಲಕ್ಷ ಲಕ್ಷ ಹಣ ಪಡೆದು, ಹಿಂತಿರುಗಿಸದೆ ವಂಚಿಸಲು ಯತ್ನಿಸುತ್ತಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?: ಶಿವಮೊಗ್ಗದ ಯುವಕನೊಬ್ಬನಿಗೆ ಫೇಸ್ ಬುಕ್ ಮೂಲಕ ದಾವಣಗೆರೆಯ ಯುವತಿಯೊಬ್ಬಳ ಪರಿಚಯವಾಗಿದೆ. ನಂತರ ಮೊಬೈಲ್ ಮೂಲಕ ಮಾತುಕತೆ ಶುರುವಾಗಿದೆ. ಇಬ್ಬರೂ ಹಲವು ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ಕೊಟ್ಟಿದ್ದೇವೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

ಯುವತಿ ಹಲವು ಭಾರಿ ಯುವಕನಿಂದ ಹಣ ಪಡೆದಿದ್ದಾಳೆ. ಮೊಬೈಲ್ ಬ್ಯಾಂಕಿಂಗ್ ಮೂಲಕ ಯುವಕ ಹಣ ವರ್ಗಾವಣೆ. ಸುಮಾರು ನಾಲ್ಕು ಲಕ್ಷ ರೂ. ಹಣ ವರ್ಗಾಯಿಸಲಾಗಿದೆ. ಈ ಹಣವನ್ನು ಹಿಂತಿರುಗಿಸುವಂತೆ ಕೇಳಿದರೂ ಯುವತಿ ಮರುಪಾವತಿ ಮಾಡುತ್ತಿಲ್ಲ. ತನಗೆ ವಂಚನೆ ಮಾಡಲು ಯುವತಿ ಯತ್ನಿಸುತ್ತಿದ್ದಾಳೆ ಎಂದು ಯುವಕ ದೂರಿನಲ್ಲಿ ತಿಳಿಸಿದ್ದಾನೆ.

ನ್ಯಾಯಾಲಯದ ಮೆಟ್ಟಿಲು ಹತ್ತಿದ ಯುವಕ: ಯುವತಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರೆ ಯುವತಿಯನ್ನು ವಿಚಾರಣೆಗೆ ಒಳಪಡಿಸಿ ಕಳುಹಿಸಲಾಗಿತ್ತು. ಯಾವುದೆ ಕ್ರಮ ಕೈಗೊಳ್ಳದಿರುವುದರಿಂದ ಯುವಕ ನ್ಯಾಯಾಲಯದ ಮೊರೆ ಹೊಗಿದ್ದ. ವಕೀಲರ ಮೂಲಕ ಖಾಸಗಿ ದೂರು ದಾಖಲಿಸಿದ್ದಾನೆ. ಕೋರ್ಟ್ ಸೂಚನೆ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News