ಭಾರತದಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ಕರ್ನಾಟಕದಲ್ಲಿ ಪತ್ತೆ

Update: 2021-12-02 11:52 GMT

ಹೊಸದಿಲ್ಲಿ: ಭಾರತದಲ್ಲಿ ಮೊದಲ  ಒಮೈಕ್ರಾನ್ ರೂಪಾಂತರದ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಎರಡೂ ಪ್ರಕರಣಗಳು ಕರ್ನಾಟಕದ ಬೆಂಗಳೂರಿನಿಂದ ವರದಿಯಾಗಿದ್ದು, ರೋಗಿಗಳು 66 ಹಾಗೂ  46 ವರ್ಷ ವಯಸ್ಸಿನವರಾಗಿದ್ದಾರೆ. ಅವರ ಗೌಪ್ಯತೆಯನ್ನು ರಕ್ಷಿಸಲು ಅವರ ಗುರುತನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಬ್ಬರು ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲಾ ಜನರನ್ನು ಪತ್ತೆಹಚ್ಚಲಾಗಿದೆ ಹಾಗೂ ಪರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ಒಮೈಕ್ರಾನ್ ಪತ್ತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆದರೆ ಅರಿವು ಸಂಪೂರ್ಣವಾಗಿ ಅವಶ್ಯಕವಾಗಿದೆ. ಕೋವಿಡ್ -ಸೂಕ್ತ ನಡವಳಿಕೆಯನ್ನು ಅನುಸರಿಸಿ, ಜನಸಂದಣಿಯನ್ನು ತಪ್ಪಿಸಿ" ಎಂದು ಅಗರ್ವಾಲ್ ಹೇಳಿದರು.

ಓಮೈಕ್ರಾನ್ ಹಿಂದಿನ ಕೊರೋನ ರೂಪಾಂತರಗಳಿಗಿಂತ ಗಮನಾರ್ಹವಾಗಿ ಹೆಚ್ಚು ಸಾಂಕ್ರಾಮಿಕ ವಾಗಿರಬಹುದು ಎಂದು ಆರಂಭಿಕ ಸೂಚನೆಗಳು ಲಭಿಸಿವೆ. ಆದಾಗ್ಯೂ, ಈ ಪ್ರಬೇಧವು  ಮಾರಣಾಂತಿಕವಾಗಿದೆಯೇ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News