ಕಲುಷಿತ ಗಾಳಿ ಪಾಕಿಸ್ತಾನದಿಂದ ಬರುತ್ತಿರಬಹುದು: ಸುಪ್ರಿಂ ಕೋರ್ಟ್ ಗೆ ತಿಳಿಸಿದ ಉತ್ತರ ಪ್ರದೇಶ ಸರಕಾರ

Update: 2021-12-03 06:37 GMT
ಸಾಂದರ್ಭಿಕ ಚಿತ್ರ(PTI)

ಹೊಸದಿಲ್ಲಿ: ಪಾಕಿಸ್ತಾನದಿಂದ ಕಲುಷಿತ ಗಾಳಿ ಬರುತ್ತಿರಬಹುದು. ಇದರಿಂದ ದಿಲ್ಲಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸುಪ್ರೀಂಕೋರ್ಟ್ ಗೆ ಶುಕ್ರವಾರ ತಿಳಿಸಿದ ಉತ್ತರಪ್ರದೇಶ ಸರಕಾರವು, ಕೈಗಾರಿಕೆಗಳ ಮುಚ್ಚುವಿಕೆಗೆ ಆಕ್ಷೇಪ ಎತ್ತಿದೆ.

ದಿಲ್ಲಿ ವಾಯು ಮಾಲಿನ್ಯ ಕುರಿತ ಅರ್ಜಿ ವಿಚಾರಣೆ ವೇಳೆ ಉತ್ತರಪ್ರದೇಶವು ಸುಪ್ರೀಂಕೋರ್ಟ್ ಈ ರೀತಿಯ ಪ್ರತಿಕ್ರಿಯೆ ನೀಡಿದೆ.

ಕೈಗಾರಿಕೆಗಳನ್ನು ಮುಚ್ಚುವುದರಿಂದ ರಾಜ್ಯದಲ್ಲಿನ ಕಬ್ಬು ಹಾಗೂ  ಹಾಲಿನ ಕೈಗಾರಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಉತ್ತರಪ್ರದೇಶದತ್ತ  ಹೊರಗಿನಿಂದ ಗಾಳಿ ಬೀಸುತ್ತಿದೆ. ಹಾಗಾಗಿ  ಕಲುಷಿತ ಗಾಳಿಯು ಬಹುಶಃ ಪಾಕಿಸ್ತಾನದಿಂದ ಬರುತ್ತಿರಬಹುದು ಎಂದು ಉತ್ತರಪ್ರದೇಶ ಸರಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ವ್ಯಂಗ್ಯವಾಡಿದ್ದಾರೆ. “ಹಾಗಾದರೆ ನೀವು ಪಾಕಿಸ್ತಾನದಲ್ಲಿ ಕೈಗಾರಿಕೆಗಳನ್ನು ನಿಷೇಧಿಸಲು ಬಯಸುವಿರಾ?” ಎಂದು ಕೇಳಿದ್ದಾರೆ ಎಂದು barandbench.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News