ಡಿ.18ರಂದು ಬೃಹತ್ ಲೋಕ ಅದಾಲತ್ ಆಯೋಜನೆ: ನ್ಯಾ.ಬಿ.ವೀರಪ್ಪ ಮಾಹಿತಿ

Update: 2021-12-07 16:09 GMT

ಬೆಂಗಳೂರು, ಡಿ.7: ಡಿ.18ರಂದು ಲೋಕ ಅದಾಲತ್ ನಡೆಯಲಿದ್ದು, 3 ಲಕ್ಷ ಪ್ರಕರಣಗಳು ರಾಜಿ ಮಾಡುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಾರ್ಚ್ನಲ್ಲಿ 3.32 ಲಕ್ಷ ಪ್ರಕರಣ, ಆಗಸ್ಟ್ ನಲ್ಲಿ 3.88 ಲಕ್ಷ ಪ್ರಕರಣ, ಸಪ್ಟೆಂಬರ್ 2.18 ಲಕ್ಷ ಪ್ರಕರಣ ಸೇರಿ ಒಟ್ಟು 9.40 ಲಕ್ಷ ಪ್ರಕರಣಗಳು ಇತ್ಯರ್ಥ ವಾಗಿವೆ. ರಾಜ್ಯದಲ್ಲಿ 20.99 ಲಕ್ಷ ಪ್ರಕರಣಗಳು ನ್ಯಾಯಾಲಯದಲ್ಲಿವೆ ಎಂದರು.

ಕುಂದುಕೊರತೆ ನಿವಾರಣಾ ಘಟಕ ಸ್ಥಾಪನೆ ಮಾಡಲಾಗುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಮೆಗಾ ಅದಾಲತ್‌ನಲ್ಲಿ ಪ್ರಕರಣವು ಇತ್ಯರ್ಥವಾದಲ್ಲಿ ವ್ಯಕ್ತಿಯು ನೆಮ್ಮದಿ ಜೀವನ ನಡೆಸಲು ಸಾಧ್ಯ. ಲೋಕ್ ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಪ್ರಕರಣವು ಇತ್ಯರ್ಥವಾದ ಬಳಿಕ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಹಾಗಾಗಿ, ಕೋರ್ಟ್ಗಳಲ್ಲಿ ಪ್ರಕರಣ ಹೊಂದಿರುವ ಸಾರ್ವಜನಿಕರು ಅದಾಲತ್ ನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ವಿವರಿಸಿದರು.

ವ್ಯಾಜ್ಯ ಪೂರ್ವ ಪ್ರಕರಣಗಳಾದ ಚೆಕ್ ಅಮಾನ್ಯ, ಆರ್ಥಿಕ ವಸೂಲಾತಿ, ಉದ್ಯೋಗ ದಲ್ಲಿ ಪುನರ್ ಸ್ಥಾಪಿಸಲ್ಪಡುವ, ಕಾರ್ಮಿಕ ವಿವಾದ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್, ನೀರಿನ ಶುಲ್ಕಗಳು, ಜೀವನಾಂಶ ಪ್ರಕರಣಗಳನ್ನು (ರಾಜಿಯಾಗಬಲ್ಲ ಅಪರಾಧ, ವೈವಾಹಿಕ, ಕುಟುಂಬ ಹಾಗೂ ಇತರೆ ಸಿವಿಲ್ ಪ್ರಕರಣ ಗಳು) ಅದಾಲತ್‌ನಲ್ಲಿ ತೆಗೆದುಕೊಳ್ಳ ಲಾಗುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News