ಗುತ್ತಿಗೆದಾರರ ದೂರಿಗೆ ಪ್ರಧಾನಿ ಏನು ಕ್ರಮ ಕೈಗೊಂಡಿದ್ದಾರೆ: ಕಾಂಗ್ರೆಸ್ ಪ್ರಶ್ನೆ

Update: 2021-12-09 12:01 GMT

ಬೆಂಗಳೂರು, ಡಿ. 9: ‘ನಾ ಖಾವುಂಗಾ, ನಾ ಖಾನೆದುಂಗಾ' ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೊಟ್ಟಿರುವ ದೂರಿನ ಅನ್ವಯ ಏನು ಕ್ರಮ ಕೈಗೊಂಡಿದ್ದಾರೆ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಖಾರವಾಗಿ ಇಂದಿಲ್ಲಿ ಪ್ರಶ್ನೆ ಮಾಡಿದ್ದಾರೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನಿ ಮೋದಿಯವರು ಹೇಳುವುದೆಲ್ಲಾ ಕೇವಲ ಬಾಯಿ ಮಾತಿಗೆ ಮಾತ್ರವೇ? ಮಾಧ್ಯಮಗಳು ಸತ್ಯ ಏನು ಎಂದು ಜನರಿಗೆ ಹೇಳಬೇಕು. ಗುತ್ತಿಗೆದಾರರು ಶೇ.18ರಷ್ಟು ಜಿಎಸ್ಪಿ ಕೊಡಬೇಕು. ಅವರ ಲಾಭ ಶೇ.20ರಷ್ಟು ಹೋಗಬೇಕು, ಎಲ್ಲವೂ ಸೇರಿ ಶೇ.78ರಷ್ಟು ಆಗುತ್ತದೆ. ಇನ್ನು ಕೆಲಸಕ್ಕೆ ಉಳಿಯುವ ಹಣ ಕೇವಲ ಶೇ.22ರಷ್ಟು ಮಾತ್ರ!' ಎಂದು ಲೇವಡಿ ಮಾಡಿದ್ದಾರೆ.

‘ಇಂತಹ ಸರಕಾರ ಹಿಂದೆಂದಾದರೂ ಬಂದಿತ್ತಾ? ಸರಕಾರಕ್ಕೆ ಶೇ.40ರಷ್ಟು ಹಣವನ್ನು ಕಮಿಷನ್ ಕೊಡಬೇಕೆಂದು ಗುತ್ತಿಗೆದಾರರ ಸಂಘವೇ ಲಿಖಿತವಾಗಿ ಪ್ರಧಾನಿಗಳಿಗೆ ದೂರು ನೀಡಿದೆ' ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

‘ಈಗಾಗಲೇ ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಬೆಂಗಳೂರಿನ ರಸ್ತೆಗಳನ್ನು ಕಾರಿಡಾರ್‍ಗಳನ್ನಾಗಿಸಲು ಸರಕಾರ ಮುಂದಾಗಿರುವುದು ಅನಗತ್ಯ ದುಂದುವೆಚ್ಚಕ್ಕೆ ದಾರಿ ಮಾಡಿಕೊಡುತ್ತಿದೆ. ಅಗತ್ಯವಿರುವ ಯೋಜನೆಗಳಿಗೆ ಸಂಪನ್ಮೂಲದ ಕೊರತೆಯ ಸಬೂಬು ಹೇಳುವ ಸರಕಾರ ಇಂತಹ ಅನಗತ್ಯ ಯೋಜನೆಗೆ ಕೈ ಹಾಕಿರುವುದು ಶೇ.40ರಷ್ಟು ಕಮಿಷನ್‍ಗಾಗಿಯೇ?' ಎಂದು ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.


ಅನಗತ್ಯ ಭೀತಿ

‘ಕೋವಿಡ್ ಓಮೈಕ್ರಾನ್ ಸೋಂಕಿನ ವಿಷಯದಲ್ಲಿ ಅನಗತ್ಯ ಭಯ ಹುಟ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಎಲ್ಲಿ ಸೋಂಕು ಹೆಚ್ಚಾಗಿದೆ? ಅನಗತ್ಯ ಭೀತಿ ಹುಟ್ಟಿಸಿ ಇಡೀ ರಾಜ್ಯದ ಆರ್ಥಿಕತೆಯನ್ನೇ ಹಾಳು ಮಾಡಲಾಗುತ್ತಿದೆ. ಉದ್ಯಮಗಳು, ಹೊಟೇಲ್‍ಗಳ ಮೇಲೆ ನಿಬರ್ಂಧ ಹೇರಿದರೆ ಈಗμÉ್ಟೀ ಚೇತರಿಸಿಕೊಳ್ಳುತ್ತಿರುವ ಅರ್ಥ ವ್ಯವಸ್ಥೆಗೆ ಮಾರಕವಾಗಲಿದೆ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News